Thursday, September 23, 2021
Homeದೇಶರಜೆಯಿದ್ದರೂ ಮನೆಗೆ ತೆರಳದೆ ಮರಳಿ ಕರ್ತವ್ಯಕ್ಕೆ ಹಾಜರಾದ ಅಭಿನಂದನ್ !

ಇದೀಗ ಬಂದ ಸುದ್ದಿ

ರಜೆಯಿದ್ದರೂ ಮನೆಗೆ ತೆರಳದೆ ಮರಳಿ ಕರ್ತವ್ಯಕ್ಕೆ ಹಾಜರಾದ ಅಭಿನಂದನ್ !

ಪಾಕಿಸ್ತಾನದ ಅತ್ಯಾಧುನಿಕ ಯುದ್ಧ ವಿಮಾನ ಎಫ್ 16 ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅಭಿನಂದನ್ ಅವರಿಗೆ 4 ವಾರಗಳ ಆನಾರೋಗ್ಯದ ರಜೆ ಮೇಲೆ ಮನೆಗೆ ತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಚೆನ್ನೈನಲ್ಲಿರುವ ಮನೆಗೆ ತೆರಳದೇ ಶ್ರೀನಗರದ ವಾಯುನೆಲೆಗೆ ಮರಳಿದ್ದಾರೆ.

ಭಾರತಕ್ಕೆ ಮರಳಿದ ನಂತರ ವೈದ್ಯಕೀಯ ಚಿಕಿತ್ಸೆ, ವಾಯು ಸೇನೆಯ ವಿಚಾರಣೆಯ ನಂತರ ರಜೆ ಮೇಲೆತೆರಳುವಂತೆ ಸಲಹೆ ನೀಡಲಾಗಿತ್ತು. ಆದರೆ ಅಭಿನಂದನ್ ಮನೆಗೆ ತೆರಳದೇ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಫೆ.27 ರಂದು ಮಿಗ್ 21 ವಿಮಾನದಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕ ಬಿದ್ದಿದ್ದ ಅಭಿನಂದನ್ 58 ಗಂಟೆಗಳ ಬಳಿಕ ಬಿಡುಗಡೆಯಾಗಿದ್ದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img