Wednesday, September 22, 2021
Homeಜಿಲ್ಲೆಬೆಳಗಾವಿಬೆಳಗಾವಿಯಲ್ಲಿ ಒಂದಾದ ಬದ್ಧ ವೈರಿಗಳು - ಅಂಗಡಿ ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್..!

ಇದೀಗ ಬಂದ ಸುದ್ದಿ

ಬೆಳಗಾವಿಯಲ್ಲಿ ಒಂದಾದ ಬದ್ಧ ವೈರಿಗಳು – ಅಂಗಡಿ ಗೆಲುವಿನ ಓಟಕ್ಕೆ ಬೀಳುತ್ತಾ ಬ್ರೇಕ್..!

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಸುರೇಶ್​ ಅಂಗಡಿ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಸಜ್ಜಾಗಿದೆ. ಬೆಳಗಾವಿಯಲ್ಲಿ ಬಿಜೆಪಿಯನ್ನು ಸೋಲಿಸಲು ಸತೀಶ್​ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಕೈಜೋಡಿಸುವ ಮೂಲಕ ಪಕ್ಷ ಸಂಘಟನೆಗೆ  ಒತ್ತು ನೀಡಿದ್ದಾರೆ. ಅತ್ತ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಕೂಡ ಪ್ರಚಾರ ಆರಂಭಿಸಿದ್ದು, ಚಾಯ್ ಪೇ ಚರ್ಚಾ ಎಂದು ಮತದಾರರ ಬಳಿ ತಲುಪುವ ಪ್ರಯತ್ನ ಮಾಡುತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಸುರೇಶ್​ ಅಂಗಡಿ ಗೆಲುವು ಸಾಧಿಸಿದ್ದಾರೆ. ನಾಲ್ಕನೇ ಅವಧಿಗೂ ಬಿಜೆಪಿ ಸುರೇಶ್ ಅಂಗಡಿಗೆ ಟಿಕೆಟ್ ನೀಡಿದೆ. ಸುರೇಶ್​ ಅಂಗಡಿಯವರನ್ನು ಸೋಲಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಜಾರಕಿಹೊಳಿ -ಹೆಬ್ಬಾಳ್ಕರ್ ಒಂದಾಗಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ವಿ.ಎಸ್ ಸಾಧುನ್ನವರ್ ಹಾಗೂ ಶಿವಕಾಂತ ಸಿದ್ನಾಳ್ ಹೆಸರನ್ನು ಕಾಂಗ್ರೆಸ್​ ಹೈಕಮಾಂಡ್​ಗೆ ಶಿಫಾರಸು ಮಾಡಿತ್ತು. ಹೈಕಮಾಂಡ್ ವಿ. ಎಸ್. ಸಾಧುನ್ನವರ್ ಅವರಿಗೆ ಟಿಕೆಟ್ ನೀಡಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img