Wednesday, September 22, 2021
Homeರಾಜಕೀಯಬಿಜೆಪಿ ನಾಯಕರಿಗೆ ಭವಿಷ್ಯದ ಬಗ್ಗೆ ಆತಂಕ ! ಹೈಕಮಾಂಡ್ ವಿರುದ್ಧ ಶಾಸಕ ಸೋಮಣ್ಣ ಕಿಡಿಕಾರಿದ್ದೇಕೆ...?

ಇದೀಗ ಬಂದ ಸುದ್ದಿ

ಬಿಜೆಪಿ ನಾಯಕರಿಗೆ ಭವಿಷ್ಯದ ಬಗ್ಗೆ ಆತಂಕ ! ಹೈಕಮಾಂಡ್ ವಿರುದ್ಧ ಶಾಸಕ ಸೋಮಣ್ಣ ಕಿಡಿಕಾರಿದ್ದೇಕೆ…?

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಗೆ ಟಿಕೆಟ್‌ ನಿರಾಕರಿಸಿರೋದು ಬಿಜೆಪಿಯಲ್ಲಿನ ಭಿನ್ನಮತಕ್ಕೆ ಕಾರಣವಾಗಿದೆ.  
ಮಾಜಿ ಸಚಿವ ಹಾಗೂ ಪಕ್ಷದ ಹಿರಿಯ ನಾಯಕ ವಿ.ಸೋಮಣ್ಣ ಬಹಿರಂಗವಾಗಿಯೇ ಹೈಕಮಾಂಡ್‌ ವಿರುದ್ಧ ಕಿಡಿಕಾರಿದ್ದಾರೆ. ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಸೋಮಣ್ಣ ಭೇಟಿ ಮಾಡಿ ಸುದೀರ್ಘ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ತೇಜಸ್ವಿನಿ ಅನಂತ್ ಕುಮಾರ್‌ ಅವರಿಗೆ ಟಿಕೆಟ್‌ ತಪ್ಪಿರುವುದು ದುರ್ದೈವದ ಸಂಗತಿ ಅಂತ ಹೇಳಿದ್ದಾರೆ. 

ಟಿಕೆಟ್ ಕಡೇ ಕ್ಷಣದಲ್ಲಿ ಕೈ ತಪ್ಪಿದ್ದು ಹೇಗೆ? ಇದಕ್ಕೆ ಯಾರು ಕಾರಣ ? ಎಲ್ಲವೂ ನಮಗೆ ಗೊತ್ತಾಗಬೇಕು ಎಂದು ಸೋಮಣ್ಣ ಹೇಳಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಗೆ ಟಿಕೆಟ್ ತಪ್ಪಿದ್ದರ ಹಿಂದೆ ಶಾಸಕ ರವಿಸುಬ್ರಮಣ್ಯ ಅವರ ಪಾತ್ರವಿದೆ ಅಂತ ಆರೋಪಿಸಿದ್ದಾರೆ.

ಸೋಮಣ್ಣ ಅವರನ್ನ ಬಿಜೆಪಿಗೆ ಕರೆ ತಂದಿರೋದು ದಿವಂಗತ ಅನಂತ್ ಕುಮಾರ್ ಹಾಗೂ ಮಾಜಿ ಸಿ.ಎಂ ಬಿ. ಎಸ್ ಯಡಿಯೂರಪ್ಪನವರು. ಇದೀಗ ಹೈಕಮಾಂಡ್ ದಿಢೀರ್ ಈ ರೀತಿಯ ನಿರ್ಧಾರ ತೆಗೆದುಕೊಂಡಿರೋದು ಸೋಮಣ್ಣ ಸೇರಿದಂತೆ ಕೆಲ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ನಮ್ಮ ಭವಿಷ್ಯವೇನು ಅನ್ನೋ ಆತಂಕ ಕಾಡುತ್ತಿದೆ. ಬಿಜೆಪಿ ಪಡಶಾಲೆಯಲ್ಲೂ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.    

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img