Thursday, September 23, 2021
Homeದೇಶಬಾಹ್ಯಾಕಾಶದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ -ಜಗತ್ತೇ ನಿಬ್ಬೆರಗು

ಇದೀಗ ಬಂದ ಸುದ್ದಿ

ಬಾಹ್ಯಾಕಾಶದಲ್ಲಿ ಭಾರತ ಸರ್ಜಿಕಲ್ ಸ್ಟ್ರೈಕ್ -ಜಗತ್ತೇ ನಿಬ್ಬೆರಗು

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಜಗತ್ತೇ ನಿಬ್ಬೆರಗಾಗುವ ಸಾಧನೆ ಮಾಡಿದೆ. ಅಂತರಿಕ್ಷದಲ್ಲೇ ಸ್ಯಾಟಲೈಟ್ ಹೊಡೆದುರುಳಿಸುವ ಮೂಲಕ ಜಗತ್ತಿನ ನಾಲ್ಕನೇ ಶಕ್ತಿಯಾಗಿ ಭಾರತ ಹೊರ ಹೊಮ್ಮಿದೆ. ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈ ಖುಷಿ ಸುದ್ದಿ ಪ್ರಕಟಿಸಿದ್ದಾರೆ.

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ  ಮಹತ್ವದ ಸಾಧನೆ ಮಾಡಿದೆ. ಸಾಕಷ್ಟು ಉಪಗ್ರಹಗಳನ್ನು ನಭಕ್ಕೆ ಹಾರಿಸಿದೆ. ಆದರೆ, ಉಪಗ್ರಹಗಳನ್ನು ಹೊಡೆದುರುಳಿಸುವ ಸಾಮರ್ಥ್ಯ  ಹೊಂದಿರಲಿಲ್ಲ.  ಭಾರತ ಈಗ  ಉಪಗ್ರಹ-ಪ್ರತಿಬಂಧಕ ಕ್ಷಿಪಣಿ ಅಭಿವೃದ್ಧಿ ಪಡಿಸಿದ್ದು ಕೇವಲ ಮೂರೇ ನಿಮಿಷದಲ್ಲಿ ಈ ಯಶಸ್ವಿ ಪ್ರಯೋಗ ನಡೆಸಿದೆ ಎಂದು ಮೋದಿ ಹೇಳಿದ್ದಾರೆ. ಮಿಷನ್  ಶಕ್ತಿ ಹೆಸರಿನಲ್ಲಿ ಈ ಪ್ರಯೋಗ ನಡೆಸಲಾಗಿದೆ. ಆದರೆ, ಈ ಸಾಮರ್ಥ್ಯವನ್ನು ಯಾವ ದೇಶದ ವಿರುದ್ಧವೂ ಬಳಸುವುದಿಲ್ಲ ಎಂದು ವಿಶ್ವಸಮುದಾಯಕ್ಕೆ ಭಾರತ ಭರವಸೆ ನೀಡಿದೆ.

ಭಾರತ ಇರುವಂತಹ  ಪರಿಸ್ಥಿತಿಯಲ್ಲಿ ತನ್ನ ರಕ್ಷಣೆಗಾಗಿ  ಈ ಸಾಮರ್ಥ್ಯ ಪಡೆದುಕೊಳ್ಳುವುದು ಅನಿವಾರ್ಯವಾಗಿತ್ತು ಎಂದು ಮೋದಿ ಪ್ರತಿಪಾದಿಸಿದ್ದಾರೆ. ಇದಕ್ಕಾಗಿ ಶ್ರಮಿಸಿದ ಡಿಆರ್ ಡಿ ಒ  ಸಹಿತ ಎಲ್ಲಾ ವಿಜ್ಞಾನಿಗಳನ್ನು ಮೋದಿ ಅಭಿನಂದಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img