Wednesday, September 22, 2021
Homeರಾಜಕೀಯಸುಮಲತಾಗೆ ಮಂಡ್ಯದಲ್ಲಿ ಅಭದ್ರತೆ ಕಾಡುತ್ತಿದ್ಯಾ..! CRPF ಭದ್ರತೆಗೆ ಮನವಿ ಮಾಡಿದ್ಯಾಕೆ..?

ಇದೀಗ ಬಂದ ಸುದ್ದಿ

ಸುಮಲತಾಗೆ ಮಂಡ್ಯದಲ್ಲಿ ಅಭದ್ರತೆ ಕಾಡುತ್ತಿದ್ಯಾ..! CRPF ಭದ್ರತೆಗೆ ಮನವಿ ಮಾಡಿದ್ಯಾಕೆ..?

ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್​ ಸೇರಿದಂತೆ ನಾಲ್ವರಿಗೆ ಸಿಆರ್‌ಪಿಎಫ್(CRPF) ಭದ್ರತೆ ನೀಡುವಂತೆ ಕೋರಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಮನವಿ ಮಾಡಿದ್ದಾರೆ.  ಸುಮಲತಾ ಅಂಬರೀಶ್​, ಪುತ್ರ ಅಭಿಷೇಕ್ ಅಂಬರೀಶ್​, ನಟರಾದ ದರ್ಶನ್ ಮತ್ತು ಯಶ್ ಅವರಿಗೆ ಸೂಕ್ತ ಭದ್ರತೆ ನೀಡಿ ಅಂತಾ ಮನವಿ ಮಾಡಿದ್ದಾರೆ.

ಕನ್ನಡದ ಹೆಸರಾಂತ ನಟ ದರ್ಶನ್, ಸುಮಲತಾ ಅಂಬರೀಶ್​ ಅವರ ಬೆಂಬಲಕ್ಕೆ ನಿಂತಿದ್ದಾರೆ. ಮಾರ್ಚ್ 23 ರಂದು ಕೆಲ ದುಷ್ಕರ್ಮಿಗಳು ದರ್ಶನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಜೆಡಿಎಸ್-ಕಾಂಗ್ರೆಸ್‌ನ ನಾಯಕರು ಬಹಿರಂಗವಾಗಿ ಸುಮಲತಾ ಅಂಬರೀಶ್​, ಅಭಿಷೇಕ್ ಅಂಬರೀಶ್​, ದರ್ಶನ್ ಮತ್ತು ಯಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಈಗಾಗಲೇ ಸುಮಲತಾ ಅಂಬರೀಶ್​ ಅವರ ಫೋನ್ ಕದ್ದಾಲಿಕೆಯಾಗುತ್ತಿದೆ ಎಂಬ ದೂರನ್ನು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದಾರೆ. ಹೀಗೆ ಹಲವು ವಿಷಯಗಳನ್ನ ಪ್ರಸ್ತಾಪಿಸಿ ಸೂಕ್ತ ಭದ್ರತೆ ಕಲ್ಪಿಸುವಂತೆ ಲಿಂಬಾವಳಿ ಆಗ್ರಹಿಸಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img