Thursday, September 23, 2021
Homeರಾಜಕೀಯಸಿದ್ದು ಭೇಟಿ ಮಾಡಿದ ಪ್ರಜ್ವಲ್ ರೇವಣ್ಣ- ಸ್ನೇಹಿತನ ಪುತ್ರನಿಗೆ ರಾಜಕೀಯ ಪಾಠ

ಇದೀಗ ಬಂದ ಸುದ್ದಿ

ಸಿದ್ದು ಭೇಟಿ ಮಾಡಿದ ಪ್ರಜ್ವಲ್ ರೇವಣ್ಣ- ಸ್ನೇಹಿತನ ಪುತ್ರನಿಗೆ ರಾಜಕೀಯ ಪಾಠ

ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಪ್ರಜ್ವಲ್​ ರೇವಣ್ಣ ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎ. ಮಂಜು ವಿರುದ್ಧ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿರೋ ರೇವಣ್ಣ ಹಿರಿಯರ ಆಶೀರ್ವಾದ ಪಡೆಯುತ್ತಿದ್ದಾರೆ.

ಭೇಟಿ ನಂತರ ಮಾತನಾಡಿದ ಪ್ರಜ್ವಲ್​, “ನಾನು ಚಿಕ್ಕವನಿದ್ದಾಗಿನಿಂದಲೂ ಸಿದ್ದರಾಮಯ್ಯ ಅವರನ್ನು ನೋಡಿಕೊಂಡು ಬೆಳೆದಿದ್ದೇನೆ. ಹಾಗಾಗಿ ಅವರ ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದೆ.  ಚುನಾವಣೆ ಕುರಿತು ಸಾಕಷ್ಟು ಸಲಹೆ ನೀಡಿದ್ದಾರೆ. ಎಲ್ಲೆಲ್ಲಿ ಪ್ರಚಾರಕ್ಕೆ ಬರುತ್ತೇನೆ ಎಂದು ತಿಳಿಸಿದ್ದಾರೆ. ನಮ್ಮ ಕುಟುಂಬದ ಜೊತೆ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ ಎಂದು ಹೇಳಿದ್ದಾರೆ.  ಕಡೂರು, ಅರಕಲಗೂಡು, ಅರಸಿಕೆರೆ ಹಾಸನದಲ್ಲಿ ಪ್ರಚಾರಕ್ಕೆ ಬರುತ್ತೇನೆ ಅತ ಸಿದ್ದರಾಮಯ್ಯ ಭರವಸೆ ನೀಡಿದ್ದಾರಂತೆ. ಜೊತೆಗೆ ಬಹಿರಂಗ ಸಭೆಯಲ್ಲಿಯೂ ಸಿದ್ದರಾಮಯ್ಯ ಭಾಗವಹಿಸೋ ಸಾಧ್ಯತೆ ಇದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img