Thursday, September 23, 2021
Homeಅಂತರ್ ರಾಷ್ಟ್ರೀಯಚೀನಾ 30000 ಮ್ಯಾಪ್ ಡಿಲೀಟ್ ಮಾಡಿದ್ದೇಕೆ ಗೊತ್ತಾ ?

ಇದೀಗ ಬಂದ ಸುದ್ದಿ

ಚೀನಾ 30000 ಮ್ಯಾಪ್ ಡಿಲೀಟ್ ಮಾಡಿದ್ದೇಕೆ ಗೊತ್ತಾ ?

ಜಗತ್ತಿನಲ್ಲಿ ಯಾರೂ ಮಾಡದ ಕೆಲಸವೊಂದನ್ನು ಚೀನಾ ಮಾಡಿಬಿಟ್ಟಿದೆ. ಇದ್ದಕ್ಕಿದ್ದಂತೆ 30 000 ಮ್ಯಾಪ್ ಅಂದರೆ ಭೂಪಟಗಳನ್ನು ಡಿಲೀಟ್ ಮಾಡಿದೆ. ಆದರೆ, ಹೀಗೆ ಮಾಡಲು ಕಾರಣ ಏನು ಅನ್ನೋದನ್ನು ಅದು ಜಗತ್ತಿಗೆ ಬಹಿರಂಗಪಡಿಸಿಲ್ಲ. ಚೀನಾ ತನ್ನ ಭೌಗೋಳಿಕ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಹೀಗೆ 30 ಸಾವಿರ ಮ್ಯಾಪ್ ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ರಾಷ್ಟ್ರೀಯ ವಕ್ತಾರರು ಹೇಳಿಕೊಂಡಿದ್ದಾರೆ. ಭಾರತದ ಮೇಲೆ ಸಿಟ್ಟು ಕಾರಣ? ಅಂದ ಹಾಗೆ, ಡಿಲೀಟ್ ಮಾಡಿದ ಅಷ್ಟೂ ಭೂಪಟಗಳು ಭಾರತದ ನಕಾಶೆ ಹೊಂದಿದ್ದವು ಎನ್ನಲಾಗಿದೆ. ವಿಶ್ವಭೂಪಟಗಳಲ್ಲಿರುವ ಭಾರತದ ನಕಾಶೆಯಲ್ಲಿ ಅರುಣಾಚಲಪ್ರದೇಶವನ್ನು ಭಾರತದ ಭೂಭಾಗವೆಂದು ತೋರಿಸಲಾಗಿದೆ. ಅಲ್ಲದೆ, ತೈವಾನ್ ಅನ್ನು ಸ್ವತಂತ್ರ ಭೂಪ್ರದೇಶವೆಂದು ತೋರಿಸಲಾಗಿದೆ. ಹೀಗಾಗಿ, ಅರುಣಾಚಲದ ಮೇಲೆ ಹಕ್ಕು ಸಾಧಿಸುತ್ತಿರುವ ಚೀನಾ, ಇಂತಹ 30 ಸಾವಿರ ಮ್ಯಾಪ್ ಗಳನ್ನು ಡಿಲೀಟ್ ಮಾಡಿಸಿದೆ. ಇದೊಂಥರಾ ಕೈಲಾಗದವನು ಮೈಪರಚಿಕೊಂಡ ಪರಿಸ್ಥಿತಿ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img