Wednesday, September 22, 2021
Homeರಾಜಕೀಯಮೈಸೂರಿನಲ್ಲಿ ಘರ್ಜಿಸಿದ ಕೈ ಪಡೆ – ರೋಡ್ ಶೋ ಮೂಲಕ ವಿಜಯ ಶಂಕರ್ ನಾಮಪತ್ರ –...

ಇದೀಗ ಬಂದ ಸುದ್ದಿ

ಮೈಸೂರಿನಲ್ಲಿ ಘರ್ಜಿಸಿದ ಕೈ ಪಡೆ – ರೋಡ್ ಶೋ ಮೂಲಕ ವಿಜಯ ಶಂಕರ್ ನಾಮಪತ್ರ – ಬಿಜೆಪಿಯಿಂದ ಸಿಂಹ ಉಮೇದುವಾರಿಕೆ

ಲೋಕಸಭಾ ಚುನಾವಣಾ ಕಣ ಮತ್ತಷ್ಟು ರಂಗೇರಿದೆ. ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯ ಶಂಕರ್ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ರು. ಬಳಿಕ ಬೃಹತ್ ರೋಡ್‌ ಶೋ ನಡೆಸಿ, ಮತಯಾಚನೆ ಮಾಡಿದ್ರು. ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್, ಮಾಜಿ ಸಚಿವರಾದ ತನ್ವೀರ್ ಸೇಠ್, ಹೆಚ್. ಸಿ. ಮಹದೇವಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮುಂತಾದವರು ವಿಜಯ ಶಂಕರ್‌ಗೆ ಸಾಥ್ ನೀಡಿದ್ರು. ಆದ್ರೆ ವಿಜಯ್ ಶಂಕರ್‌ ನಾಮಪತ್ರ ಸಲ್ಲಿಸುವ ವೇಳೆ ಉಸ್ತುವಾರಿ ಸಚಿವರು ಸೇರಿದಂತೆ ಕೆಲ ಜೆಡಿಎಸ್‌ ನಾಯಕರು ಗೈರಾಗಿದ್ರು.

ಇನ್ನೊಂದೆಡೆ  ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಪ್ರತಾಪ್ ಸಿಂಹ ಕೂಡ ಉಮೇದುವಾರಿಕೆ ಸಲ್ಲಿಸಿದ್ರು. ನಾಮಪತ್ರ ಸಲ್ಲಿಕೆಗೂ ಮುನ್ನ ಟೆಂಪಲ್ ರನ್ ನಡೆಸಿದ ಪ್ರತಾಪ್ ಸಿಂಹ  ಸುತ್ತೂರು ಮಠ, ಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿ ಪೂಜೆ ಸಲ್ಲಿಸಿದ್ರು.  ಈ ವೇಳೆ ಮಾತನಾಡಿದ ಪ್ರತಾಪ್ ಸಿಂಹ ಚಾಮುಂಡೇಶ್ವರಿ ಕುಳಿತಿರೋ ವಾಹನ ಸಿಂಹ.  ಸಿಂಹವನ್ನ ಅಧಿದೇವತೆ ಎಂದೂ ಕೈ ಬಿಡಲ್ಲ ಅಂತ ನಂಬಿಕೆ ಇದೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img