Thursday, September 23, 2021
Homeರಾಜಕೀಯಮೈತ್ರಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ! ಕಾರ್ಯಕರ್ತರ ನಡೆಗೆ ದೋಸ್ತಿ ಕಂಗಾಲು

ಇದೀಗ ಬಂದ ಸುದ್ದಿ

ಮೈತ್ರಿ ಅಭ್ಯರ್ಥಿಗಳಿಗೆ ಬಂಡಾಯದ ಬಿಸಿ ! ಕಾರ್ಯಕರ್ತರ ನಡೆಗೆ ದೋಸ್ತಿ ಕಂಗಾಲು

ಅಭ್ಯರ್ಥಿಗಳ ಹಣೆಬರಹ ಮತದಾರನ ಕೈಯಲ್ಲಿ !

ಹೌದು. ರಾಜ್ಯದಲ್ಲಿ ಈಗ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವಿದೆ. ಇಂತಹ ಸಂದರ್ಭದಲ್ಲಿ ಮೈತ್ರಿ ಧರ್ಮ ಪಾಲಿಸೋದು ರಾಜಕೀಯ ಪಕ್ಷಗಳ ಕರ್ತವ್ಯ. ದೊಡ್ಡವರು ತಮ್ಮ ರಾಜಕೀಯ ಹಿತಕ್ಕಾಗಿ ಮೈತ್ರಿ ಮಾಡಿಕೊಂಡಿರಬಹುದು ನಿಜ. ಆದ್ರೆ ಇದನ್ನ ಪಕ್ಷದ ಕಾರ್ಯಕರ್ತರ ಮೇಲೆ ಹೇರೋದು ಎಷ್ಟು ಸರಿ ಎಂಬ ಪ್ರಶ್ನೆ ಕಾಡುತ್ತಿದೆ.  ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮದಂತೆ ಮಂಡ್ಯ ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲಾಗಿದೆ. ಸಿಎಂ ಪುತ್ರ ನಿಖಿಲ್ ಇಲ್ಲಿ ಅಖಾಡಕ್ಕಿಳಿದಿದ್ದಾರೆ.  ಆದ್ರೆ ಕಾಂಗ್ರೆಸ್ ಕಾರ್ಯಕರ್ತರು ಕೊತ ಕೊತ ಕುದಿಯುತ್ತಿದ್ದಾರೆ. ಬಹಿರಂಗವಾಗಿ ಸುಮಲತಾಗೆ ಬೆಂಬಲ ಸೂಚಿಸುತ್ತಿದ್ದಾರೆ.  ಸುಮಲತಾ ಅವರಿಗೆ ಬೆಂಬಲ ನೀಡುತ್ತಿರುವ ತಳ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತಿದೆ, ಆದರೆ ಇದು ಅಲ್ಲಿನ ಸ್ಥಳೀಯ ಕಾರ್ಯಕರ್ತರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ. ಕಾರ್ಯಕರ್ತರು ತಮ್ಮ ಪಾಡಿಗೆ ತಾವೇ ಕೆಲಸ ಮಾಡುತ್ತಿದ್ದಾರೆ. 

ಮೈತ್ರಿಯಿಂದಾಗಿ ಹಾಸನದಲ್ಲಿ ಮಾಜಿ ಸಚಿವ ಎ. ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಇಲ್ಲಿ ಕೂಡ ಕೆಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಸಚಿವ ರೇವಣ್ಣ ನಡೆಯಿಂದಾಗಿ ಕೆಲ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನಗೊಂಡಿದ್ದಾರೆ.

ಇನ್ನೂ ತುಮಕೂರು ಬಗ್ಗೆ ಹೇಳ್ಬೇಕಾ..? ಇಲ್ಲಿ ಸೋಲಿಲ್ಲದ ಸರದಾರ ಹಾಲಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡದೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ದೇವೇಗೌಡರನ್ನ ಕಣಕ್ಕಿಳಿಸಲಾಗಿದೆ. ಮುದ್ದಹನುಮೇಗೌಡರು ತಮ್ಮ ಬೆಂಬಲಿಗರೊಂದಿಗೆ ಚರ್ಚಿಸಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೆಲ ಕಾಂಗ್ರೆಸ್ ಕಾರ್ಯಕರ್ತರು ಮುದ್ದಹನುಮೇಗೌಡರ ಕೆಲ್ಸ ನೋಡಿ ಮತಹಾಕಬಹುದು. ಆದ್ರೆ ಅವರ ಎದುರಾಳಿ ಮಾಜಿ ಪ್ರಧಾನಿ. ಇನ್ನೂ ಡಿಸಿಎಂ ಪರಮೇಶ್ವರ್ ಗ ಇದು ಉಗುಳಲು ಆಗದ ನುಂಗಲು ಆಗದ ಪರಿಸ್ಥಿತಿ ತಂದೊಡ್ಡಿದೆ. ಮೈತ್ರಿ ಧರ್ಮದಂತೆ ಪರಮೇಶ್ವರ್ ದೇವೇಗೌಡರಿಗೆ ಬಹಿರಂಗ ಬೆಂಬಲ ಸೂಚಿಸಿದ್ದಾರೆ. 

ಮೈಸೂರಿನಲ್ಲೂ ಸ್ವಲ್ಪ ಮಟ್ಟಿಗೆ ಬಂಡಾಯದ ಬಿಸಿ ಕಾಣುತ್ತಿದೆ. ಇಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಬೆಂಬಲಿಗನಿಗೆ ಟಿಕೆಟ್ ಗಿಟ್ಟಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಆದ್ರೆ ಸಚಿವ ಜಿ ಟಿ ದೇವೇಗೌಡ ಮೈಸೂರು ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿದ್ರು. ಆದ್ರೂ ಕೊನೆಗೂ ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ರು. ಇಂದು ಮೈತ್ರಿ ಅಭ್ಯರ್ಥಿ ವಿಜಯ ಶಂಕರ್ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ನಾಯಕರು ಯಾರು ಇರಲಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ನಿಖಿಲ್ ಗೆ ಬೆಂಬಲ ಸೂಚಿಸುತ್ತಿಲ್ಲ ಅನ್ನೋದು ಇಲ್ಲಿನ ಜೆಡಿಎಸ್ ಶಾಸಕರ ವಾದ.  ಹೀಗಾಗಿ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಗೆ ಕೈ ಕೊಟ್ಟಿದ್ದಾರೆ.

ಇನ್ನೂ ಹಾಸನ , ತುಮಕೂರು ಮಂಡ್ಯ ಮತ್ತು ಮೈಸೂರಿನಲ್ಲಿ ಜೆಡಿಎಸ್ ಪಕ್ಷವನ್ನು ಕಾಂಗ್ರೆಸ್  ಕಡ್ಡಾಯವಾಗಿ ಬೆಂಬಲಿಸಬೇಕು ಎಂಬ ಆಜ್ಞೆ  ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇದು ಮೈತ್ರಿ ಪಕ್ಷಗಳ ಬುಡವನ್ನು ಅಲ್ಲಾಡಿಸುತ್ತಿದೆ.

ಮೈಸೂರಿನಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸಲು ಜೆಡಿಎಸ್ ಬೆಂಬಲ ಬೇಕಾಗಿದೆ. ಹಾಸನ, ತುಮಕೂರು ಮಂಡ್ಯದಲ್ಲಿ ಜೆಡಿಎಸ್ ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ, ಆದರೆ ಕಾಂಗ್ರೆಸ್ ಕಾರ್ಯಕರ್ತರ ನಡೆಯಿಂದಾಗಿ ಉಭಯ ಪಕ್ಷಗಳ ನಾಯಕರು ಕಂಗಾಲಾಗಿದ್ದಾರೆ.  ಹಾಸನ, ತುಮಕೂರು ಮಂಡ್ಯದಲ್ಲಿ ಕಾಂಗ್ರೆಸ್ ಮತಗಳನ್ನು ಜೆಡಿಎಸ್ ಅಭ್ಯರ್ಥಿಗೆ ಪರಿವರ್ತಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ರೆ  ಕಾರ್ಯಕರ್ತರು ಮತ್ತು ಮತದಾರರ ನಡೆಯೇ ಇಲ್ಲಿ ಪ್ರಮುಖವಾಗಿದೆ. ಮತದಾರ ಯಾರಿಗೆ ಜೈ ಅನ್ತಾನೋ ಅವನೇ ಇಲ್ಲಿ ಸಂಸದನಾಗುತ್ತಾನೆ. ಮಂಡ್ಯ, ಮೈಸೂರು,  ಹಾಸನ ತುಮಕೂರಿನಲ್ಲಿ ಅಭ್ಯರ್ಥಿಗಳ ಹಣೆಬರಹ ನಿರ್ಧರಿಸೋದು ಮತದಾರ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img