Tuesday, September 21, 2021
Homeರಾಜಕೀಯಮುಹೂರ್ತ ಮೀರಿ ನಾಮಪತ್ರ ಸಲ್ಲಿಸಿದ ನಿಖಿಲ್ ! – ಮಂಡ್ಯ ರಾಜಕೀಯ ಪಡಶಾಲೆಯಲ್ಲಿ ಗುಸು ಗುಸು...

ಇದೀಗ ಬಂದ ಸುದ್ದಿ

ಮುಹೂರ್ತ ಮೀರಿ ನಾಮಪತ್ರ ಸಲ್ಲಿಸಿದ ನಿಖಿಲ್ ! – ಮಂಡ್ಯ ರಾಜಕೀಯ ಪಡಶಾಲೆಯಲ್ಲಿ ಗುಸು ಗುಸು ಚರ್ಚೆ

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರ್ ಸ್ವಾಮಿ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಜನಸಾಗರವೇ ಹರಿದುಬಂದಿತ್ತು. ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ರು. ನಿಖಿಲ್ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ರೇವಣ್ಣ, ಡಿಕೆ ಶಿವಕುಮಾರ್, ಸಿಎಸ್ ಪುಟ್ಟರಾಜು ಸಾಥ್ ನೀಡಿದ್ರು.

ಕಾಳಿಕಾಂಬ ದೇವಾಲಯದಿಂದ ರೋಡ್​ ಶೋ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ನಿಖಿಲ್ ನಾಮಪತ್ರ ಸಲ್ಲಿಸಿದ್ರು. ಜ್ಯೋತಿಷಿಗಳು 2.45ಕ್ಕೆ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಇಟ್ಟಿದ್ದರು. ಆದ್ರೆ ರೋಡ್​ ಶೋ ಹಿನ್ನೆಲೆಯಲ್ಲಿ ನಿಖಿಲ್ ತಡವಾಗಿ ಅಂದ್ರೆ 3 ಗಂಟೆ ಬಳಿಕ ನಾಮಪತ್ರ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ದೇವೇಗೌಡರ ಕುಟುಂಬ ಮುಹೂರ್ತ, ಘಳಿಗೆ ಮೇಲೆ ತುಂಬಾ ನಂಬಿಕೆ ಇಟ್ಟುಕೊಂಡಿದೆ. ಹೀಗಾಗಿ ನಿಖಿಲ್ ಮುಹೂರ್ತ ಮೀರಿ ನಾಮಪತ್ರ ಸಲ್ಲಿಸಿರುವ ಬಗ್ಗೆ ಮಂಡ್ಯ ರಾಜಕೀಯ ಪಡಶಾಲೆಯಲ್ಲು ಗುಸು ಗುಸು ಚರ್ಚೆಗೆ ಗ್ರಾಸವಾಗಿದೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img