Sunday, May 16, 2021
Homeರಾಜಕೀಯಬೆಂಗಳೂರು ಉತ್ತರದಲ್ಲಿ ಕೃಷ್ಣಬೈರೇಗೌಡ V/S ಸದಾನಂದ ಗೌಡ

ಇದೀಗ ಬಂದ ಸುದ್ದಿ

ಬೆಂಗಳೂರು ಉತ್ತರದಲ್ಲಿ ಕೃಷ್ಣಬೈರೇಗೌಡ V/S ಸದಾನಂದ ಗೌಡ

ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು ಉತ್ತರದಿಂದ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ. ನಾಳೆ ಕೃಷ್ಣ ಬೈರೇಗೌಡ ನಾಮಪತ್ರ ಸಲ್ಲಿಸಲಿದ್ದಾರೆ. ಕೇಂದ್ರದ ಹಾಲಿ ಸಚಿವ ಸದಾನಂದಗೌಡ ವಿರುದ್ಧ ಕೃಷ್ಣ ಬೈರೇಗೌಡ ತೊಡೆತಟ್ಟಿದ್ದಾರೆ.  ಉತ್ತರದಲ್ಲಿ ಅಭ್ಯರ್ಥಿಯಾಗುವುದಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ.  ಉತ್ತರ ಕ್ಷೇತ್ರದಲ್ಲಿರುವ ಎಲ್ಲಾ ಕಾಂಗ್ರೆಸ್​ ಶಾಸಕರು ಕೃಷ್ಣ ಭೈರೇಗೌಡ ಅವರೇ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದ್ದರು.  ಕೃಷ್ಣ ಭೈರೇಗೌಡರು  ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಯೂ ಹೆಚ್ಚು ಎಂಬುದು ಕಾಂಗ್ರೆಸ್​ ನಾಯಕರ ವಿಶ್ವಾಸವಾಗಿದೆ. ಹೀಗಾಗಿ ಕಳೆದ ರಾತ್ರಿ ನಡೆದ ಕಾಂಗ್ರೆಸ್ ಜೆಡಿಎಸ್ ನಾಯಕರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img