Wednesday, September 22, 2021
Homeಸಿನಿಮಾದೀಪಿಕಾ ಪಡುಕೋಣೆಯ ಬಹು ನಿರೀಕ್ಷಿತ 'ಚಪಾಕ್' ಚಿತ್ರದ ಫಸ್ಟ್ ಲುಕ್ ರಿಲೀಸ್

ಇದೀಗ ಬಂದ ಸುದ್ದಿ

ದೀಪಿಕಾ ಪಡುಕೋಣೆಯ ಬಹು ನಿರೀಕ್ಷಿತ ‘ಚಪಾಕ್’ ಚಿತ್ರದ ಫಸ್ಟ್ ಲುಕ್ ರಿಲೀಸ್

ಆಸಿಡ್ ಸಂತ್ರಸ್ತೆ ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ಅಗರ್ವಾಲ್  ಬದುಕಿನ ಕಥೆಯಾಧಾರಿತ ಚಿತ್ರ ಚಪಾಕ್ . ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ದೀಪಿಕಾ ಇಲ್ಲಿ ಮಾಲ್ಟಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿನಿಂದ ಶೂಟಿಂಗ್ ಆರಂಭವಾಗಲಿದೆ. ಸ್ವತಃ ದೀಪಿಕಾ ಚಿತ್ರದ ಫಸ್ಟ್ ಲುಕ್ ನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರಕ್ಕೆ ದೀಪಿಕಾ ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆ ಬಂಡವಾಳ ಹೂಡಿದ್ದಾರೆ.
ಲಕ್ಷ್ಮಿ ಅಗರ್ವಾಲ್ 15 ವರ್ಷದ ಹುಡುಗಿಯಾಗಿದ್ದಾಗ ತಮ್ಮ ಪರಿಚಯದ 32 ವರ್ಷದ ವ್ಯಕ್ತಿಯಿಂದ ಆಸಿಡ್ ದಾಳಿಗೊಳಗಾಗಿದ್ದರು. ನಂತರ ಹಲವು ಸರ್ಜರಿಗೊಳಗಾಗಿದ್ದರು. ನಂತರ ಲಕ್ಷ್ಮಿ ಆಸಿಡ್ ಸಂತ್ರಸ್ತರ ಬದುಕಿಗಾಗಿ ಮತ್ತು ಅಂತಹ ದಾಳಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಆಸಿಡ್ ದಾಳಿ ನಂತರದ ಲಕ್ಷ್ಮಿ ಬದುಕು ಚಿತ್ರದಲ್ಲಿ ಮೂಡಿ ಬರಲಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img