Wednesday, September 22, 2021
Homeದೇಶಅಧಿಕಾರಕ್ಕೆ ಬಂದರೆ ಬಡವರಿಗೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯ-ರಾಹುಲ್ ಗಾಂಧಿ

ಇದೀಗ ಬಂದ ಸುದ್ದಿ

ಅಧಿಕಾರಕ್ಕೆ ಬಂದರೆ ಬಡವರಿಗೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯ-ರಾಹುಲ್ ಗಾಂಧಿ

ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ  ರೈತರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ ಪುನರುಚ್ಚರಿಸಿದ್ದಾರೆ. ದೇಶದ ಶೇ.20ರಷ್ಟು ಅತಿ ಬಡ ಕುಟುಂಬಗಳ ಖಾತೆಯಲ್ಲಿ ವಾರ್ಷಿಕ 72 ಸಾವಿರ ರೂ. ಠೇವಣಿ ಇಡುವುದಾಗಿ ಭರವಸೆ ನೀಡಿದ್ದಾರೆ.
ಕನಿಷ್ಠ ಆದಾಯ ಖಾತರಿ ಯೋಜನೆಯಡಿ, ಅರ್ಹ ರೈತರಿಗೆ  ತಿಂಗಳಿಗೆ ಆರು ಸಾವಿರ ರೂಪಾಯಿಯಂತೆ ವಾರ್ಷಿಕ 72 ಸಾವಿರ ರೂ. ನೀಡುವುದಾಗಿ ತಿಳಿಸಿದರು. ಇದೊಂದು ಕ್ರಾಂತಿಕಾರಿ ಯೋಜನೆಯಾಗಲಿದೆ ಎಂದ ರಾಗಾ ಇದರಿಂದ ದೇಶದ 5 ಕೋಟಿ ಕುಟುಂಬಗಳು ಹಾಗೂ 25 ಕೋಟಿ ಜನರು ನೇರ ಲಾಭ ಪಡೆಯಲಿದ್ದಾರೆ. ಇದರ ಪ್ರಕಾರ, ಪ್ರತಿ ತಿಂಗಳು ರೈತರ ಖಾತೆಗೆ 6 ಸಾವಿರ ರೂ. ಜಮೆಯಾಗಲಿದೆ ಎಂದರು. ಈ ಯೋಜನೆಯಿಂದ ದೇಶದ ಯಾವುದೇ ಬಡ ಜನರು ಉಪವಾಸ ಮಲಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img