Sunday, September 19, 2021
Homeರಾಜಕೀಯಕೈ ತಪ್ಪಿದ ಲೋಕಸಭಾ ಟಿಕೆಟ್ – ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ ನಟ ಯಾರು ಗೊತ್ತಾ..?

ಇದೀಗ ಬಂದ ಸುದ್ದಿ

ಕೈ ತಪ್ಪಿದ ಲೋಕಸಭಾ ಟಿಕೆಟ್ – ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ ನಟ ಯಾರು ಗೊತ್ತಾ..?

ಪಾಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್ ಕೈ ತಪ್ಪಿದ ಪರಿಣಾಮ ಗರಂ ಆಗಿರುವ ಶತ್ರುಘ್ನ ಸಿನ್ಹಾ, ಬಿಜೆಪಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಹಾಲಿ ಸಂಸದ ಶತ್ರುಘ್ನ ಸಿನ್ಹಾ ಅವರ ಪಾಟ್ನಾ ಸಾಹೀಬ್ ಕ್ಷೇತ್ರದ ಟಿಕೆಟ್ ಅನ್ನು ಸಚಿವ ರವಿಶಂಕರ್ ಪ್ರಸಾದ್ ಗೆ ನೀಡಲಾಗಿದೆ. ಈ ಮೂಲಕ ಸಿನ್ಹಾಗೆ ಬಿಜೆಪಿ ಕೊಕ್ ನೀಡಿದೆ. ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಶತ್ರುಘ್ನ ಸಿನ್ಹಾ, ‘ನ್ಯೂಟನ್ ಮೂರನೇ ನಿಯಮದಂತೆ ಪ್ರತಿಯೊಂದು ಕ್ರಿಯೆಗೆ ಸಮಾನ ಹಾಗೂ ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ. ಅದೇ ನಾಣ್ಯದಿಂದ ಲೆಕ್ಕ ಚುಕ್ತಾ ಮಾಡುವೆ’ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಪಕ್ಷದ  ಹಿರಿಯ ನಾಯಕ ಎಲ್​.ಕೆ.ಅಡ್ವಾಣಿ ಅವರಿಗೆ ಟಿಕೆಟ್ ನೀಡದಿರುವುದಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಕಿಡಿಕಾರಿದ್ದಾರೆ.  

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img