Thursday, September 23, 2021
Homeರಾಜಕೀಯರಾಜಕೀಯಕ್ಕೆ ಬಿಜೆಪಿ ಭೀಷ್ಮ ಗುಡ್ ಬೈ

ಇದೀಗ ಬಂದ ಸುದ್ದಿ

ರಾಜಕೀಯಕ್ಕೆ ಬಿಜೆಪಿ ಭೀಷ್ಮ ಗುಡ್ ಬೈ

ಬಿಜೆಪಿಯ ಭೀಷ್ಮ ಎಲ್ ಕೆ ಅಡ್ವಾಣಿ. ಒಂದು ಕಾಲದಲ್ಲಿ ಅಡ್ವಾಣಿ, ವಾಜಪೇಯಿ ಅಂದ್ರೆ ಬಿಜೆಪಿ, ಬಿಜೆಪಿ ಅಂದ್ರೆ ಅಡ್ವಾಣಿ, ವಾಜಪೇಯಿ ಎನ್ನುವಂತಾಗಿತ್ತು. ಆದ್ರೆ ಈಗ ಕಾಲ ಬದಲಾಗಿದೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಯ ಭೀಷ್ಮ ತೆರೆ ಮರೆಗೆ ಸರಿತಾ ಬಂದ್ರು.

ಗಾಂಧಿನಗರ ಲೋಕಸಭಾ ಕ್ಷೇತ್ರ ಅಡ್ವಾಣಿ ಅವರ ಖಾಯಂ ಕ್ಷೇತ್ರ ಹಾಗೂ ಕರ್ಮ ಭೂಮಿಯಾಗಿತ್ತು. ಗಾಂಧಿನಗರ ಬೇರೆಯಲ್ಲ ಅಡ್ವಾಣಿ ಬೇರಯಲ್ಲ ಎಂಬಷ್ಟು ಅವಿನಾಭಾವವಾಗಿ ಬೆರತು ಹೋಗಿತ್ತು. ಎಲ್ಲಾ 6 ಲೋಕಸಭಾ ಚುನಾವಣೆಗಳಲ್ಲಿ ಅಡ್ವಾಣಿ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದಾರೆ.  ಅದು ನೂರಲ್ಲ ಸಾವಿರವಲ್ಲ ಲಕ್ಷ ಲಕ್ಷ ಮತಗಳ ಅಂತರದಿಂದ. 2014ರ ವರೆಗೆ ಗುಜರಾತ್‌ನಲ್ಲಿ ಅತ್ಯಂತ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸಿದ ದಾಖಲೆಯನ್ನು ಅಡ್ವಾಣಿ ನಿರ್ಮಿಸಿದ್ದಾರೆ. 1998ರಲ್ಲಿ ಅಡ್ವಾಣಿ 2.77 ಲಕ್ಷ ಮತಗಳ ಅಂತರದಿಂದ ಭಾರಿ ಗೆಲುವು ಸಾಧಿಸಿದ್ದರು
ಅಡ್ವಾಣಿ ಕ್ಷೇತ್ರವಾದ ಗುಜರಾತ್ ನ ಗಾಂಧಿನಗರ ಕ್ಷೇತ್ರದಿಂದ ಈ ಬಾರಿ ಅಮಿತ್ ಶಾ ಕಣಕ್ಕಿಳಿಯಲಿದ್ದಾರೆ.  


ಗಾಂಧಿನಗರ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿದ್ರು ಅಡ್ವಾಣಿ.  ಅಡ್ವಾಣಿ ಅವರಿಗೆ ಈ ಬಾರಿ ಟಿಕೆಟ್ ನೀಡದಿರಲು ಬಿಜೆಪಿ ನಿರ್ಧರಿಸಿದ್ದು ಆ ಕ್ಷೇತ್ರದಿಂದ ಶಾ ಅಖಾಡಕ್ಕಿಳಿದಿದ್ದಾರೆ.

2014 ರಲ್ಲಿ ಪ್ರಧಾನಿಯಾಗಿ ಮೋದಿ ಆಯ್ಕೆ ಬಳಿಕ ಹೆಚ್ಚಾಗಿ ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳದೇ ಅಡ್ವಾಣಿ ಮೌನ ವಹಿಸಿದ್ದರು. ಇತ್ತೀಚೆಗೆ ಅಡ್ವಾಣಿಯವರನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭೇಟಿ ಮಾಡಿದಾಗ ಖುದ್ದು ಅಡ್ವಾಣಿ ಅವರು ಸ್ಪರ್ಧೆಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆಗ ಶಾ ‘ನಿಮ್ಮ ಪುತ್ರ ಅಥವಾ ಪುತ್ರಿಯನ್ನು ನಿಲ್ಲಿಸಿ’ ಎಂದು ಕೇಳಿದಾಗ ಅಡ್ವಾಣಿ ಅದಕ್ಕೂ ನಿರಾಕರಿಸಿದರು ಎನ್ನಲಾಗಿದೆ.

ನವೆಂಬರ್ 8, 1927ರಲ್ಲಿ, ಅಂದಿನ ಭಾರತದ ಭಾಗವಾಗಿದ್ದ ಸಿಂದ್ ಪ್ರದೇಶದ ಗೋರೆಗಾಂವ್ ಗ್ರಾಮದಲ್ಲಿ ಅಡ್ವಾಣಿ ಹುಟ್ಟಿದ್ದು.  ಕರಾಚಿಯ ಶಾಲೆಗಳಲ್ಲಿ ಓದಿ ಮುಂಬೈ ವಿಶ್ವವಿದ್ಯಾಲಯದ ಪದವಿ ಪಡೆದರು. ಸ್ವಾತಂತ್ರ್ಯ ಬಂದ ಸಮಯದಲ್ಲಿ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯದರ್ಶಿಯಾಗಿದ್ದರು. 1951ರಲ್ಲಿ ಅವರು ಶ್ಯಾಮ್ ಪ್ರಕಾಶ್ ಮುಖರ್ಜಿಯವರು ಸ್ಥಾಪಿಸಿದ ಜನಸಂಘಕ್ಕೆ ಸೇರಿದ್ರು. ಅಲ್ಲಿ ಹಲವು ಹುದ್ದೆಗಳನ್ನು ನಿರ್ವಹಿಸಿ 1975ರ  ವೇಳೆಗೆ ಆ ಪಕ್ಷದ ಅಧ್ಯಕ್ಷರಾದ್ರು. ಜಯಪ್ರಕಾಶ್ ನಾರಾಯಣ್ ಅವರ ಕರೆಗೆ ಓಗೊಟ್ಟು ಜನಸಂಘ ಮುಂದೆ ಜನತಾಪಕ್ಷಕ್ಕೆ ಬಂತು. ಜನತಾಪಕ್ಷ ಒಡೆದು ಹೋಳಾದಾಗ ಭಾರತೀಯ ಜನತಾ ಪಕ್ಷ ಸ್ಥಾಪಿಸಿದ್ದು ಇದೇ ಅಡ್ವಾಣಿ.

ಭಾರತೀಯ ಜನತಾ ಪಕ್ಷದ ಪ್ರಮುಖ ನಿರ್ಣಯಗಳಲ್ಲದೆ, ಪ್ರತಿಪಕ್ಷ ನಾಯಕನಾಗಿ, ಉತ್ತಮ ಸಂಸದೀಯ ಪಟುವಾಗಿ ಅಡ್ವಾಣಿ ಗುರುತಿಸಿಕೊಂಡಿದ್ದರು. ಸ್ವತಃ ತಮ್ಮ ಮೇಲೆ ಬಾಬ್ರಿ ಮಸೀದಿ ಧ್ವಂಸದ ಆರೋಪವಿದ್ದರೂ ಇತ್ತೀಚೆಗೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದರು. “ಬೇರೆ ಪಕ್ಷದ ಭ್ರಷ್ಟಾಚಾರ ಮಾತ್ರವಲ್ಲ, ನಮ್ಮ ಪಕ್ಷದವರ ಭ್ರಷ್ಟಚಾರವನ್ನು ಕೂಡಾ ನಾನು ಸಹಿಸುವುದಿಲ್ಲ” ಎಂದು ಹೇಳಿದ್ರು.  ಇದರ ಪರಿಣಾಮವೇ ಯಡಿಯೂರಪ್ಪ ಪಕ್ಷ ತೊರೆಯುವಂತಾಗಿದ್ದು.

ಒಂದು ಕಾಲದಲ್ಲ ಅಡ್ವಾಣಿ ದೇಶದ ಭಾವಿ ಪ್ರಧಾನಿ ಅಂತಲೇ ಗುರುತಿಸಿಕೊಂಡಿದ್ದರು. ಆದ್ರೆ ಅಡ್ವಾಣಿ ಆಶ್ರಯದಲ್ಲಿ ಪಳಗಿದ ನರೇಂದ್ರ ಮೋದಿಗೆ ಆ ಪಟ್ಟ ಒಲಿಯಿತು. ಇತ್ತೀಚಿಗಿನ ದಿನಗಳಲ್ಲಿ ಅಡ್ವಾಣಿ ಹಾಗೂ ಮೋದಿ ಒಂದೇ ಹಾದಿಯಲ್ಲಿ ಹೋಗುತ್ತಿರಲಿಲ್ಲ.

ಅಡ್ವಾಣಿಗೆ ವಯಸ್ಸಾಗಿರೋದು, ಅಡ್ವಾಣಿ ಜನಪ್ರಿಯತೆ ಕಡಿಮೆಯಾಗುತ್ತಿರುವುದು ನಿಜ. ಇದ್ರ ಜೊತೆಗೆ ಬಿಜೆಪಿ ನಾಯಕರು ಅಡ್ವಾಣಿ ಬಗ್ಗೆ ಈಗ ಅಷ್ಟಾಗಿ ಒಲವು ತೋರುತ್ತಿಲ್ಲ. ದೇಶದ ಪ್ರಧಾನಿ ಹುದ್ದೆಗೆ, ರಾಷ್ಟ್ರಪತಿ ಹುದ್ದೆಗೂ ಅಡ್ವಾಣಿ ಹೆಸರು ಕೇಳಿಬಂದಿತ್ತು. ಬೇಸರದ ಸಂಗತಿಯಂದ್ರೆ ಅಡ್ವಾಣಿಗೆ ಈ ಯಾವುದೇ ಯೋಗ ಕೂಡಿ ಬಾರದಿರುವುದು. ಇದೀಗ ಚುನಾವಣಾ ರಾಜಕೀಯಕ್ಕೆ ಈಗ ಅಡ್ವಾಣಿ ಗುಡ್ ಬೈ ಹೇಳಿರೋದು ಬೇಸರದ ಸಂಗತಿ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img