Wednesday, September 22, 2021
Homeರಾಜಕೀಯಬೆಂಗಳೂರು ಉತ್ತರದಲ್ಲಿ ತೆನೆಹೊರ್ತಾರಾ ಬಿಗ್ ಬಾಸ್ ಶಶಿ...?

ಇದೀಗ ಬಂದ ಸುದ್ದಿ

ಬೆಂಗಳೂರು ಉತ್ತರದಲ್ಲಿ ತೆನೆಹೊರ್ತಾರಾ ಬಿಗ್ ಬಾಸ್ ಶಶಿ…?

ಬೆಂಗಳೂರು ಉತ್ತರಕ್ಕೆ ಜೆಡಿಎಸ್ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ಇದುವರೆಗೆ ಕಾಂಗ್ರೆಸ್​ನ ಹಿರಿಯ ನಾಯಕ ಬಿ.ಎಲ್​.ಶಂಕರ್​ ಹೆಸರು ಕೇಳಿಬಂದಿತ್ತು. ಈಗ ಬಿಗ್​ಬಾಸ್ ಸೀಸನ್​-6 ವಿನ್ನರ್​ ಶಶಿಕುಮಾರ್​ ಹೆಸರು ಕೇಳಿ  ಬಂದಿದೆ. ಶಶಿಕುಮಾರ್​ ಒಕ್ಕಲಿಗ ಸಮುದಾಯಕ್ಕೆ ಸೇರಿದವರು.  ಮೂಲತಃ ಚಿಕ್ಕಬಳ್ಳಾಪುರದವರಾಗಿರೋ ಶಶಿ ಎಂಎಸ್​ಸಿ ಅಗ್ರಿಕಲ್ಚರ್​ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಎಲ್ಲದಕ್ಕಿಂತಲೂ ಶಶಿ ಕುಮಾರ್ ಓರ್ವ ರೈತ.

ಈಗ ಅವರನ್ನ ಜೆಡಿಎಸ್​ನಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಈಗಾಗ್ಲೆ ಜೆಡಿಎಸ್ ಮುಖಂಡರು ಶಶಿ ಜೊತೆ ಒಂದು ಸುತ್ತಿನ ಮಾತುಕತೆಯನ್ನು ನಡೆಸಿದ್ದಾರೆ ಎಂದು ನ್ಯೂಸ್ 24ಗೆ ಮೂಲಗಳು ತಿಳಿಸಿವೆ.

ಬಿಗ್​ಬಾಸ್​ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡ ಬಳಿಕ ಕರ್ನಾಟಕದಲ್ಲಿ ಮನೆ ಮಾತಾಗಿರೋ ಶಶಿ ಅವರನ್ನ ಕಣಕ್ಕಿಳಿಸಿದ್ರೆ ಮತದಾರರನ್ನ ಸುಲಭವಾಗಿ ಸೆಳೆಯಬಹುದೆಂಬುದು ಜೆಡಿಎಸ್​ ಲೆಕ್ಕಾಚಾರ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img