Sunday, September 19, 2021
Homeರಾಜಕೀಯಬಿಎಸ್ ವೈ ವಿರುದ್ಧ ಡೈರಿ ಆರೋಪ – ಕೈಗೆ 10 ಪ್ರಶ್ನೆ ಕೇಳಿದ ಕೇಸರಿ ಪಡೆ

ಇದೀಗ ಬಂದ ಸುದ್ದಿ

ಬಿಎಸ್ ವೈ ವಿರುದ್ಧ ಡೈರಿ ಆರೋಪ – ಕೈಗೆ 10 ಪ್ರಶ್ನೆ ಕೇಳಿದ ಕೇಸರಿ ಪಡೆ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ವಿರುದ್ಧದ ಡೈರಿ ಆರೋಪ ವಿಚಾರವಾಗಿ ಕಾಂಗ್ರೆಸ್‌ ನಾಯಕರಿಗೆ ಬಿಜೆಪಿ 10 ಪ್ರಮುಖ ಪ್ರಶ್ನೆಗಳನ್ನ ಕೇಳಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಸಿಟಿ ರವಿ, 10 ಪ್ರಶ್ನೆಗಳನ್ನ ಕೇಳಿದ್ದಾರೆ. ಇದಕ್ಕೆ ಉತ್ತರಿಸುವಂತೆಯೂ ಆಗ್ರಹಿಸಿದ್ದಾರೆ. 

ಆ ಹತ್ತು ಪ್ರಶ್ನೆಗಳು ಯಾವ್ಯಾವುದು ಅಂತ ನೋಡೋದಾದ್ರೆ ….

 1. ಈ ಡೈರಿ ನಿಮಗೆ ಸಿಕ್ಕಿದ್ದು ಯಾವಾಗ?
 2. ) ಯಾರು ಈ ಡೈರಿಯನ್ನ ತಂದುಕೊಟ್ಚಿದ್ದು?
 3.  ಎಲ್ಲಿ ಕೊಟ್ಟರು?
 4.  ಒರಿಜನಲ್ ಡೈರಿ ಎಲ್ಲಿ?
 5.  ಯಾಕೆ ಇದುವರೆಗೂ ಈ ಡೈರಿ ಆಧರಿಸಿ ಲೋಕಾಯುಕ್ತ ಅಥವಾ ಎಸಿಬಿಗೆ ದೂರು ಕೊಡಲಿಲ್ಲ?
 6.  2013ರ ಮೇ ತಿಂಗಳಿನಿಂದ ನಿಮ್ಮದೇ ಪಕ್ಷದ ಆಡಳಿತ ಇದ್ದರೂ ಯಾವುದೇ ತನಿಖೆ ನಡೆಸದೇ ಇರಲು ಕಾರಣವೇನು?
 7.  ಯೂರಪ್ಪನವರದ್ದೆಂದು ಹೇಳಲಾದ ಡೈರಿಯು ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಪತ್ತೆಯಾಗಿದ್ದು ಹೇಗೆ? ಇದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಬೇಕಾಗಿದೆ.
 8.  ಹಿಂದೆ ಪ್ರಕರಣವೊಂದರ ಬಗ್ಗೆ ಎಸಿಬಿಗೆ ದೀರು ನೀಡಿದ್ದ ಕಾಂಗ್ರೆಸ್ ಮುಖಂಡರು ಈಗ ಯಾವುದೇ ದೂರು ನೀಡಲು ಇರಲು ಕಾರಣಗಳೇನು ?
 9.  ಎಂಎಲ್​ಸಿ ಗೋವಿಂದರಾಜ್ ಅವರ ಮನೆಯಲ್ಲಿ ಅದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡ ಡೈರಿಯಲ್ಲಿ ಕಾಂಗ್ರೆಸಿನ  ಯಾವ್ಯಾವ ನಾಯಕರಿಗೆ ಹಣ ಸಂದಾಯವಾಗಿದೆ ಎನ್ನುವುದು ನಮೂದಾಗಿತ್ತು. ಆಗ ಕಾಂಗ್ರೆಸ್ ಮುಖಂಡರು ಮುಜುಗರಕ್ಕೆ ಸಿಲುಕಿದ್ದಾಗಲೇ ಬಿಎಸ್​ವೈ ಅವರ ಡೈರಿ ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಸೃಷ್ಟಿಯಾಗಿದ್ದು ನಿಜವಲ್ಲವೇ?
 10.  ಬಿಜೆಪಿ ನಾಯಕರದ್ದೆನ್ನಲಾದ ಡೈರಿ ಪ್ರಕರಣವು ಜನಲೋಕಪಾಲ್ ತನಿಖೆ ನಡೆಸಲು ಯೋಗ್ಯವಾಗಿದೆ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ. ಆದರ ಆರೋಪ ಮಾಡಿದವರು ದೂರು ನೀಡಬೇಕೇ ಅಥವಾ ದೂರಿಗೊಳಗಾದವರೇ?
 11. ಈ ರೀತಿಯಾಗಿ 10 ಪ್ರಶ್ನೆಗಳನ್ನ ಕೇಳೋ ಮೂಲಕ ಮುಂದಿನ ಹೋರಾಟಕ್ಕೆ ಬಿಜೆಪಿ ಅಣಿಯಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img