Wednesday, September 22, 2021
Homeಸಿನಿಮಾನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ – ರಾಜಕೀಯ ದ್ವೇಷದ ಶಂಕೆ

ಇದೀಗ ಬಂದ ಸುದ್ದಿ

ನಟ ದರ್ಶನ್ ಮನೆ ಮೇಲೆ ಕಲ್ಲು ತೂರಾಟ – ರಾಜಕೀಯ ದ್ವೇಷದ ಶಂಕೆ

ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್​ನಲ್ಲಿರುವ ಮನೆ ಮತ್ತು ಕಚೇರಿಯ ಮೇಲೆ ಬೆಳಗ್ಗಿನ ಜಾವ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಎಸ್ಕೇಪ್​ ಆಗಿದ್ದಾರೆ. ಇದ್ರಿಂದ ಮನೆ ಹಾಗೂ ದರ್ಶನ್​ ಅವರ ಕಾರಿನ ಗಾಜು ಪುಡಿಪುಡಿಯಾಗಿದೆ. ರಾಜಕೀಯ ದ್ವೇಷದಿಂದ ಕಲ್ಲು ತೂರಾಟ ನಡೆಸಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸ್ಥಳಕ್ಕೆ ರಾಜರಾಜೇಶ್ವರಿ‌ ನಗರ ಪೊಲೀಸರು ಹಾಗೂ ಕೆಂಗೇರಿ ಎಸಿಪಿ ಭೇಟಿ ನೀಡಿ ಪರಿಶೀಲನೆ ‌ನಡೆಸಿದ್ದಾರೆ. ಕಲ್ಲು ತೂರಾಟ ಘಟನೆ ಬಗ್ಗೆ ದರ್ಶನ್ ಈವರೆಗೂ ಅಧಿಕೃತ ದೂರನ್ನಾಗಲಿ, ಹೇಳಿಕೆಯನ್ನಾಗಲಿ ನೀಡಿಲ್ಲ. ದರ್ಶನ್ ಮಂಡ್ಯದಲ್ಲಿ ಸುಮಲತಾ ಪರ ಚುನಾವಣಾ ಪ್ರಚಾರ ನಡೆಸುತ್ತಿರೋದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img