Tuesday, January 19, 2021
Home ರಾಜ್ಯ 4 ದಿನಗಳ ನಂತರ ಬದುಕಿ ಬಂದ ಯುವಕ – ಮೃತ್ಯುಂಜಯನ ಕಂಡು ನಿಬ್ಬೆರಗಾದ ಜನ !

ಇದೀಗ ಬಂದ ಸುದ್ದಿ

4 ದಿನಗಳ ನಂತರ ಬದುಕಿ ಬಂದ ಯುವಕ – ಮೃತ್ಯುಂಜಯನ ಕಂಡು ನಿಬ್ಬೆರಗಾದ ಜನ !

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಅವಶೇಷಗಳಡಿ ಸಿಲುಕಿದ್ದ ಯುವಕ ನಾಲ್ಕು ದಿನಗಳ ನಂತರ ಬದುಕಿ ಬಂದಿದ್ದಾನೆ. ಸೋಮು ರಾಮನಗೌಡ ಸಾವನ್ನೆ ಗೆದ್ದು ಬಂದ ಯುವಕ. ಕಟ್ಟಡದ ಅವಶೇಷಗಳ ಅಡಿಯಿಂದ ಸೋಮು ನಡೆದುಕೊಂಡು ಹೊರಬಂದಿದ್ದಾನೆ. ಈತ ಹೊರ ಬರುತ್ತಿದ್ದಂತೆ ರಕ್ಷಣಾ ಸಿಬ್ಬಂದಿ ಚಪ್ಪಾಳೆ ಹೊಡೆಯುವ ಮೂಲಕ ಸಂಭ್ರಮಿಸಿದ್ರು. ಸೋಮು ಸವದತ್ತಿ ತಾಲೂಕಿನ ಚಿಕ್ಕಉಳ್ಳಿಗೇರಿ ಗ್ರಾಮದವರಾಗಿದ್ದು, ಜೆಡಿಎಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ಏರಿದೆ. ಪಾರ್ಕಿಂಗ್ ಸ್ಥಳದ ಅವಶೇಷಗಳ ಅಡಿಯಲ್ಲಿ ಮೂರು ಜನರು ಇನ್ನು ಜೀವಂತವಾಗಿ ಇದ್ದಾರೆ. ಒಟ್ಟು ಮೂರು ಜನರಲ್ಲಿ ಇಬ್ಬರು ಯುವಕರು ಹಾಗೂ ಇನ್ನೊಬ್ಬಳು ಮಹಿಳೆಯಿದ್ದು ಈ ಸಂಪರ್ಕ ಸಿಕ್ಕ ಕೂಡಲೇ NDRF ಸಿಬ್ಬಂದಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ.

TRENDING