Wednesday, January 20, 2021
Home ರಾಜ್ಯ ಶಾಕಿಂಗ್ ನ್ಯೂಸ್ – ಯಡಿಯೂರಪ್ಪ –ಕರಂದ್ಲಾಜೆ ಮದ್ವೆ ನಿಜ – ಡೈರಿ ಸ್ಫೋಟ

ಇದೀಗ ಬಂದ ಸುದ್ದಿ

ಶಾಕಿಂಗ್ ನ್ಯೂಸ್ – ಯಡಿಯೂರಪ್ಪ –ಕರಂದ್ಲಾಜೆ ಮದ್ವೆ ನಿಜ – ಡೈರಿ ಸ್ಫೋಟ

ಚುನಾವಣಾ ಬಿಸಿ ಏರಿರುವಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್  ಯಡಿಯೂರಪ್ಪ ಬುಡದಲ್ಲಿ ಬಾಂಬ್ ಸ್ಫೋಟಿಸಿದೆ. ಕಾಂಗ್ರೆಸ್ ಮಾಡಿರೋ ಡೈರಿ ಸ್ಟ್ರೈಕ್ ಗೆ ಬಿಜೆಪಿ ಪತರಗುಟ್ಟಿಹೋಗಿದೆ. ಯಡಿಯೂರಪ್ಪ ಸಿ ಎಂ ಆಗಿದ್ದಾಗ ಯಾರ್ಯಾರಿಗೆ ಎಷ್ಟೆಷ್ಟು ಕೋಟಿ  ಕೊಟ್ಟಿದ್ದಾರೆ ಎಂಬ  ಮಾಹಿತಿ ಮಧ್ಯೆ, ಅವರು ಮದ್ವೆಯಾಗಿರೋ ವಿಚಾರ ಕೂಡಾ ಬಹಿರಂಗವಾಗಿದೆ.

ಮೈತ್ರಾದೇವಿ ನಿಧನವಾದ ಬಳಿಕ ತಮಗೆ ತೀವ್ರ ಒಂಟಿತನ  ಕಾಡತೊಡಗಿತ್ತು. ಹೀಗಾಗಿ ಕೇರಳದ ಚೊಟ್ಟಾಣಿಕ್ಕರ ಭಗವತಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಲಗ್ನ ಮಾಡಿಕೊಂಡು ನನ್ನ  ಪತ್ನಿಯಾಗಿ  ಕಾಯಾ-ವಾಚಾ – ಮನಸಾ ಸ್ವೀಕರಿಸಿರುತ್ತೇನೆ ಎಂದು ಯಡಿಯೂರಪ್ಪ ತಮ್ಮ ಡೈರಿಯಲ್ಲಿ  ಉಲ್ಲೇಖಿಸಿದ್ದಾರೆ. ಈ ಡೈರಿಯನ್ನು ಕಾಂಗ್ರೆಸ್  ಬಿಡುಗಡೆಗೊಳಿಸಿದೆ.

ಅಂದಹಾಗೆ,  ಈ ಬಗ್ಗೆ ಈ ಹಿಂದೆಯೂ ಸಾಕಷ್ಟು ಸುದ್ದಿಗಳು ಹಬ್ಬಿದ್ದವು. ಕೇರಳದ ದೇಗುಲದಲ್ಲಿ ದಾನವಾಗಿ ಕಟ್ಟಿಸಿದ್ದ ಕಟ್ಟಡವೊಂದರಲ್ಲಿ ಶ್ರೀಮತಿ ಶೋಭಾ ಕರಂದ್ಲಾಜೆ ಎಂದು ಫಲಕ ಹಾಕಲಾಗಿತ್ತು. ಮಾಧ್ಯಮಗಳಲ್ಲಿ ಸುದ್ಧಿಯಾದ ಬಳಿಕ ಆ ಬೋರ್ಡ್  ನಾಪತ್ತೆಯಾಗಿತ್ತು.

ಆದರೆ, ಇಂತಹ ಡೈರಿಯೇ ಇಲ್ಲ. ಅದು ನನ್ನ ಕೈ ಬರಹವೂ ಅಲ್ಲ ಎಂದು ಯಡಿಯೂರಪ್ಪ  ಪ್ರತಿಕ್ರಿಯಿಸಿದ್ದಾರೆ. ಇದೆಲ್ಲವೂ ಸುಳ್ಳು  ಎಂದು ಪ್ರತಿಪಾದಿಸಿದ್ದಾರೆ.

TRENDING