Thursday, September 23, 2021
Homeಜಿಲ್ಲೆವಿಜಯಪುರವಿಜಯಪುರದಲ್ಲಿ ಭೀಕರ ಅಪಘಾತ – 9 ಮಂದಿ ದುರ್ಮರಣ

ಇದೀಗ ಬಂದ ಸುದ್ದಿ

ವಿಜಯಪುರದಲ್ಲಿ ಭೀಕರ ಅಪಘಾತ – 9 ಮಂದಿ ದುರ್ಮರಣ

ವಿಜಯಪುರದ ಸಿಂದಗಿ ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಬಳಿ ಕ್ಯಾಂಟರ್ ಹಾಗೂ ಕ್ರೂಸರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೆ 9 ಜನರ ಸಾವನ್ನಪಿದ್ದಾರೆ. ಮೃತರನ್ನು ಸಾಗರ್(25), ಚಾಂದಬಾಶಾ(24), ಅಜೀಮ್(26), ಅಂಬರೀಶ್(28), ಶಕೀರ್ ಕೆ.ಕೆ(25), ಗುರು(32), ಶ್ರೀನಾಥ(30), ಯುನೂಸ್(27) ಹಾಗೂ ಮಂಗಸೂಬ್( 27) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿವೆ. ಮೃತರೆಲ್ಲಾ ಕಲಬುರ್ಗಿ ಜಿಲ್ಲೆ ಚಿತ್ತಾಪುರ ಪಟ್ಟಣದವರು ಎನ್ನಲಾಗಿದೆ. ಗೋವಾ ಟೂರ್ ಮುಗಿಸಿಕೊಂಡು ವಾಪಸ್ಸು ‌ಊರಿಗೆ ಹೋಗುವಾಗ‌‌ ಈ ಅವಘಡ ಸಂಭವಿಸಿದೆ.  ಕ್ರೂಸರ್ ವಾಹನದ ಚಾಲಕನ ಓವರ್ ಸ್ಪೀಡ್ ಈ ಘಟನೆಗೆ‌ ಕಾರಣ ಎನ್ನಲಾಗಿದೆ. ಒವರ್ ಟೇಕ್ ಮಾಡುವಾಗ ಎದುರಿಗೆ ಬಂದ ಕ್ಯಾಂಟರ್ ವಾಹನ ಕ್ರೂಸರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಕ್ಯಾಂಟರ್ ಡ್ರೈವರ್‌ಗೆ ಗಂಭೀರ ಗಾಯಗಳಾಗಿದೆ. ಗಾಯಗೊಂಡಿರುವ 6 ಜನರಲ್ಲಿ ಓರ್ವನ ಸ್ಥಿತಿ ಚಿಂತಾಜನಕವಾಗಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img