Thursday, September 23, 2021
Homeರಾಜಕೀಯರಂಗೇರಿದ ಕಣ – ಮೈತ್ರಿಯೇ ಬಚ್ಚೇಗೌಡರಿಗೆ ವರವಾಗುತ್ತಾ?

ಇದೀಗ ಬಂದ ಸುದ್ದಿ

ರಂಗೇರಿದ ಕಣ – ಮೈತ್ರಿಯೇ ಬಚ್ಚೇಗೌಡರಿಗೆ ವರವಾಗುತ್ತಾ?

ಚಿಕ್ಕಬಳ್ಳಾಪುರ:  ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ಲೆಕ್ಕಾಚಾರ ಈಗಾಗ್ಲೇ ಶುರುವಾಗಿದ್ದು, ಕ್ಷೇತ್ರದಲ್ಲಿ ಈ ಬಾರಿ ಮೈತ್ರಿ ಪಕ್ಷದಿಂದ ಬಿಜೆಗೆ ಪ್ಲಸ್ ಪಾಯಿಂಟ್ ಆಗೋ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ. ಕಳೆದ ಎಪ್ಪತ್ತು ವರ್ಷದಲ್ಲಿ ಒಂದು ಬಾರಿ 1996 ಜೆಡಿಎಸ್,  ಅದು ಕೇವಲ‌ ಎರಡು ವರ್ಷಕ್ಕೆ‌‌. ನಂತರ ಅದೇ ಜಾಲಪ್ಪನವರು ಕಾಂಗ್ರೆಸ್ ಗೆ ಬಂದು ಮೂರು ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಗೆದ್ದಿದ್ರು.‌ ಆದಾದ ನಂತರ ಮೋಯ್ಲಿ ಸತತ ಎರಡು ಬಾರಿ ಗೆದ್ದು ಮತ್ತೊಮ್ಮೆ  ಹ್ಯಾಟ್ರಿಕ್ ಗೆಲುವಿಗೆ ಕಾಯ್ತಿದ್ದಾರೆ. ಆದ್ರೆ ಕಳೆದ ಬಾರಿ ಗೆಲುವಿನ ಹತ್ರಕ್ಕೆ ಬಂದಿದ್ದ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡ್ರು ಕುಮಾರಸ್ವಾಮಿ ಸ್ಫರ್ಧೆಯಿಂದಾನೇ ಸೋತ್ರು ಅನ್ನೋದು ಸತ್ಯ.

ಆದ್ರೆ ಈ ಬಾರಿ ಬಚ್ಚೇಗೌಡ್ರಿಗೆ ಜೆಡಿಎಸ್ ಅಭ್ಯರ್ಥಿ ಇಲ್ಲದಿರೋದು ವರದಾನ. ಇದ್ರ ಜೊತೆಗೆ ಮೋದಿ ಅಲೆ ಕೂಡ ಇದೆ. ವೀರಪ್ಪ ಮೋಯ್ಲಿ ಕೆಲಸ‌ ಮಾಡಿಲ್ಲ ಅವ್ರು ಜನರ ಕೈಗೆ ಸಿಗಲ್ಲ ಅನ್ನೋ ಆರೋಪ ಹಾಗೂ ಸುಳ್ಳು ಭರವಸೆಗಳನ್ನು ನೀಡಿ ಯಾವುದೇ ಅಭಿವೃದ್ಧಿ ಕಾರ್ಯ‌ ಮಾಡದೇ ಇರುವುದು ಇನ್ನೂ ಕೋಲಾರ-ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಜೆಡಿಎಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಸಿ.ಆರ್.ಮನೋಹರ್ ಅವರನ್ನು ಕೂಡ ಮೈತ್ರಿ ಅಭ್ಯರ್ಥಿ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದಕ್ಕೆ ಈಗಾಗಲೇ ಮನೋಹರ್ ಅಭಿಮಾನಿಗಳು ಸಹ ಯಾವುದೇ ಕಾರಣಕ್ಕೆ ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಲ್ಲ ಅಂತ ಅಕ್ರೋಶ ವ್ಯಕ್ತಪಡಿಸಿದ್ದಾರೆ ಒಟ್ಟಾರೆ ಇವೆಲ್ಲ ಬಚ್ಚೇಗೌಡ್ರಿಗೆ ಪ್ಲಸ್ ಆದ್ರೆ ಅಚ್ಚರಿ ಇಲ್ಲ.

 ಇನ್ನು ವೀರಪ್ಪ ಮೋಯ್ಲಿ ಅವ್ರು ಕೇವಲ ಎತ್ತಿನ ಹೊಳೆ ನೀರಾವರಿ ಜಪ ಬಿಟ್ರೆ ಇನ್ನೇನೂ ಕಣ್ಣಿಗೆ ಕಾಣಿಸ್ತಿಲ್ಲ ಅನ್ನೋದು ಆರೋಪ.‌ಆದ್ರೆ ವೀರಪ್ಪ ಮೋಯ್ಲಿಯವರನ್ನು ನೆಗ್ಲೆಟ್ ಮಾಡೋ ಹಾಗಿಲ್ಲ ಮೈತ್ರಿ ಒಂದಾಗಿ ಪ್ರಚಾರ ಮಾಡಿದ್ರೆ ಬಚ್ಚೇಗೌಡರ ಗೆಲವು ಕಷ್ಟ ಅನ್ಸುತ್ತೆ. ಒಟ್ನಲ್ಲಿ ಸದ್ಯದ‌ಪರಿಸ್ಥಿತಿಯಲ್ಲಿ  ಚಿಕ್ಕಬಳ್ಳಾಪುರ ಕಾಂಗ್ರೆಸ್ ಕೋಟೆಗೆ ಬಿಜೆಪಿ ಲಗ್ಗೆ ಇಟ್ರೆ ಅಚ್ಚರಿ ಇಲ್ಲ ಅನ್ನೋದು ಅಲ್ಲಿನ‌ ಜನರ ಮನದಾಳ…

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img