Thursday, September 23, 2021
Homeರಾಜಕೀಯಪುಲ್ವಾಮದಂತಹ ದಾಳಿ ಎಲ್ಲಾ ಕಾಲದಲ್ಲೂ ನಡೆಯುತ್ತೆ–ಸ್ಯಾಮ್ ಪಿತ್ರೋಡಾ

ಇದೀಗ ಬಂದ ಸುದ್ದಿ

ಪುಲ್ವಾಮದಂತಹ ದಾಳಿ ಎಲ್ಲಾ ಕಾಲದಲ್ಲೂ ನಡೆಯುತ್ತೆ–ಸ್ಯಾಮ್ ಪಿತ್ರೋಡಾ

ಪುಲ್ವಾಮಾದಂತಹ ಉಗ್ರ ದಾಳಿಗಳು ಎಲ್ಲಾ ಕಾಲದಲ್ಲಿ ಸಂಭವಿಸುತ್ತವೆ. ಅದಕ್ಕಾಗಿ ಪಾಕಿಸ್ತಾನವನ್ನ ದೂರುವುದು ಸರಿಯಲ್ಲ ಅಂತ ಗಾಂಧಿ ಕುಟುಂಬದ ಆಪ್ತ, ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ವಾಯು ಪಡೆ ಎಲ್‌ಓಸಿ ದಾಟಿ ಪಾಕ್ ಉಗ್ರ ಸಂಘಟನೆಯ ತರಬೇತಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸಿರುವುದು ಕೂಡ ಸರಿಯಲ್ಲ ಎಂದು ತಿಳಿಸಿದ್ದಾರೆ.  ಪುಲ್ವಾಮಾ ಉಗ್ರ ದಾಳಿಗಾಗಿ ಪಾಕಿಸ್ತಾನವನ್ನು ದೂರಲು ನಿರಾಕರಿಸಿದ ಪಿತ್ರೋಡಾ, ಈ ರೀತಿಯ ಉಗ್ರ ದಾಳಿಗಳು ಎಲ್ಲ ಕಾಲದಲ್ಲೂ  ನಡೆಯುತ್ತವೆ ಎಂದು ಪ್ರತಿಪಾದಿಸಿದ್ದಾರೆ. ಮುಂಬಯಿ ಮೇಲಿನ ಉಗ್ರ ದಾಳಿಯನ್ನು ಎಂಟು ಉಗ್ರರು ನಡೆಸಿದ್ದರು. ಆ ದಾಳಿಗೆ ಪಾಕಿಸ್ತಾನವೇ ಕಾರಣ ಎಂದು ದೂರುವುದು ಸರಿಯಲ್ಲ. ಈ ರೀತಿಯ ನಿಲುವಿನಲ್ಲಿ ನನಗೆ ನಂಬಿಕೆ ಇಲ್ಲ ಎಂದು ತಿಳಿಸಿದ್ದಾರೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img