Thursday, September 23, 2021
Homeರಾಜಕೀಯಡರ್ ಪೋಕ್ ಮೋದಿ, ಡರ್ ಪೋಕ್ ಬಿಜೆಪಿ- ಬಿಜೆಪಿ ಕಾಲೆಳೆದ ರಮ್ಯಾ!

ಇದೀಗ ಬಂದ ಸುದ್ದಿ

ಡರ್ ಪೋಕ್ ಮೋದಿ, ಡರ್ ಪೋಕ್ ಬಿಜೆಪಿ- ಬಿಜೆಪಿ ಕಾಲೆಳೆದ ರಮ್ಯಾ!

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಟಿ ಸಮಯ ಮುಂದೂಡಿದ ಕುರಿತಂತೆ ಬಿಜೆಪಿ ಮಾಡಿದ ವ್ಯಂಗ್ಯಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ತಿರುಗೇಟು ನೀಡಿದ್ದಾರೆ.  ರಾಹುಲ್ ಗಾಂಧಿ ಮಾಡಿರುವ ಸುದ್ದಿಗೋಷ್ಠಿಗಳ ಸಂಖ್ಯೆಯನ್ನು ಉಲ್ಲೇಖಿಸಿ ಬಿಜೆಪಿಯನ್ನು ಟೀಕಿಸಿದ್ದಾರೆ. ರಾಹುಲ್ ಗಾಂಧಿ 24 ಬಾರಿ ಸುದ್ದಿಗೋಷ್ಠಿ ನಡೆಸಿದ್ದು, ನರೇಂದ್ರ ಮೋದಿ ಒಮ್ಮೆಯೂ ಸುದ್ದಿಗೋಷ್ಠಿ ನಡೆಸಿಲ್ಲ. ಭಯಭೀತ ಮೋದಿ, ಭಯಭೀತ ಬಿಜೆಪಿ ಎಂದು ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ. 
ಸುದ್ದಿಗೋಷ್ಠಿಯ ಸಮಯ ಬದಲಾದ ಕುರಿತು ವ್ಯಂಗ್ಯ ಮಾಡಿದ್ದ ಬಿಜೆಪಿ, ಬಹುಶಃ ರಾಹುಲ್ ಗಾಂಧಿಗೆ ನಿದ್ರೆಯಿಂದ ಏಳಲು ಸಮಯ ಬೇಕು ಎಂದೆನಿಸುತ್ತದೆ. ಹೀಗಾಗಿಯೇ ಸುದ್ದಿಗೋಷ್ಠಿ ಮುಂದೂಡಲಾಗಿದೆ. ಬೆಳ್ಳಂಬೆಳಗ್ಗೆ ಸುಳ್ಳು ಹರಡಿಸುವುದಾದರೂ ತಪ್ಪುತ್ತದೆ ಎಂದು ಟೀಕೆ ಮಾಡಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img