ನೀವು ಬೆಂಗಳೂರು ನಿವಾಸಿಗಳೇ ? ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಓಲಾದಲ್ಲಿ ಓಡಾಡ್ತಿದ್ದೀರಾ ? ಹಾಗಿದ್ರೆ,ನೀವು ನಾಳೆಯಿಂದ ಬೇರೆ ವ್ಯವಸ್ಥೆ ಮಾಡಿಕೊಳ್ಳಿ. ಕರ್ನಾಟಕದಲ್ಲಿ ಮುಂದಿನ 6 ತಿಂಗಳವರೆಗೆ ಓಲಾ ಲೈಸೆನ್ಸ್ ರದ್ದುಗೊಂಡಿದೆ.
ಪರವಾನಗಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ, 6 ತಿಂಗಳ ಕಾಲ ಲೈಸೆನ್ಸ್ ರದ್ದುಗೊಳಿಸಿ ಪ್ರಾದೇಶಿಕ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಓಲಾ ಕ್ಯಾಬ್ಸ್ ಇತ್ತೀಚೆಗಷ್ಟೇ ಓಲಾ ಆಟೋ ಆರಂಭಿಸಿತ್ತು. ಕೆಲ ದಿನಗಳ ಹಿಂದೆ, ಓಲಾ ಬೈಕ್ ಸೇವೆ ಕೂಡಾ ಆರಂಭಿಸಿತ್ತು . ಇದು 2016ರ ಆಪ್ ಆಧಾರಿತ ಅಗ್ರಿಗೇಟರ್ ಟ್ಯಾಕ್ಸಿ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಹೀಗಾಗಿ ಲೈಸೆನ್ಸ್ ರದ್ದುಗೊಳಿಸಲಾಗಿದೆ ಎಂದು ಆರ್ ಟಿ ಓ ಅಧಿಕಾರಿಗಳು ಹೇಳಿದ್ದಾರೆ.