Saturday, July 31, 2021
Homeಜಿಲ್ಲೆಬೆಳಗಾವಿಅಂತೂ ಇಂತೂ ಕೃಷ್ಣಾ ನದಿಗೆ ನೀರು ಬಂತು..!

ಇದೀಗ ಬಂದ ಸುದ್ದಿ

ಅಂತೂ ಇಂತೂ ಕೃಷ್ಣಾ ನದಿಗೆ ನೀರು ಬಂತು..!

ಕಳೆದ ಹಲವು ದಿನಗಳಿಂದ ಕೃಷ್ಣಾನದಿ ನೀರು ಖಾಲಿಯಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಚುನಾವಣೆ ಭರಾಟೆಯಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸ್ತಾರೆ ಎಂಬ ಆತಂಕ ಎದುರಾಗಿತ್ತು.  ಚಿಕ್ಕೋಡಿ ಹಾಗೂ ರಾಯಬಾಗ ತಾಲೂಕಿನ ಕೃಷ್ಣಾ ನದಿಗೆ ಸದ್ಯ ಮಹಾರಾಷ್ಟ್ರದ ಕಾಳಮ್ಮವಾಡಿ ಡ್ಯಾಂ ನಿಂದ ನೀರು ಹರಿದು ಬಂದಿದೆ. ಇದು ಚಿಕ್ಕೋಡಿ ರಾಯಬಾಗ ಅಥಣಿ ಜನತೆಯ ಸಂತಸವನ್ನು ಇಮ್ಮಡಿಗೊಳಿಸಿದೆ. ನದಿ ತೀರದ ಗ್ರಾಮಗಳಾದ ಕಲ್ಲೋಳ, ಯಕ್ಬಂಬಾ, ಯಡೂರ, ಮಾಂಜರಿ, ಚಂದೂರ, ಇಂಗಳಿ. ದಿಗ್ಗೇವಾಡಿ, ಜಲಾಲಪುರ, ಭಿರಡಿ, ಚಿಂಚಲಿ, ಕುಡಚಿ, ಶಿರಗೂರ ಸೇರಿದಂತೆ ಹಲವು ಗ್ರಾಮಗಳಿಗೆ ಇದರಿಂದ ಅನುಕೂಲವಾಗಿದೆ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img