Thursday, September 23, 2021
Homeಜಿಲ್ಲೆ800 ದಂಪತಿಯ ಸೆಕ್ಸ್ ದೃಶ್ಯ ಸೆರೆ – ಸ್ಪೈಕ್ಯಾಮ್ ಮೂಲಕ ಲೈವ್ !

ಇದೀಗ ಬಂದ ಸುದ್ದಿ

800 ದಂಪತಿಯ ಸೆಕ್ಸ್ ದೃಶ್ಯ ಸೆರೆ – ಸ್ಪೈಕ್ಯಾಮ್ ಮೂಲಕ ಲೈವ್ !

ದಕ್ಷಿಣ ಕೊರಿಯಾ ಪೊಲೀಸರು ಅತಿ ದೊಡ್ಡ ಸ್ಪೈಕ್ಯಾಮ್ ಸೆಕ್ಸ್ ಹಗರಣವನ್ನು ಬೇಧಿಸಿದ್ದಾರೆ. ಹೋಟೆಲ್ ಗಳಲ್ಲಿ ತಂಗಿದ್ದ ಸುಮಾರು 800 ದಂಪತಿ ಸೆಕ್ಸ್ ನಲ್ಲಿ ತೊಡಗಿದ್ದ ದೃಶ್ಯವನ್ನು ರಹಸ್ಯವಾಗಿ ಸೆರೆ ಹಿಡಿದು, ಅದನ್ನು ಸ್ಮೈಕ್ಯಾಮ್ ಮೂಲಕ ಲೈವ್ ಮಾಡಿದ್ದಾರೆ. ದುಷ್ಕರ್ಮಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ದೇಶದ ಸ್ಪೈಕ್ಯಾಮೆರಾ ಪ್ರಕರಣಗಳಲ್ಲೇ ಇದು ಅತಿ ದೊಡ್ಡ ಪ್ರಕರಣ ಎಂದು ಸಿಯೋಲ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.  ಹೋಟೆಲ್ ನಲ್ಲಿ ಸ್ಪೈಕ್ಯಾಮ್ ಬಳಸಿ, ಅದನ್ನು ಲೈವ್ ಮಾಡಿದ್ದು ಇದೆ ಮೊದಲು ಎನ್ನಲಾಗಿದೆ.
ಸಂಗ್ರಹ ಚಿತ್ರ
ಗ್ರಾಹಕರ ಗಮನಕ್ಕೆ ಬರದಂತೆ ಸುಮಾರು 30 ಹೋಟೆಗಳ 42 ರೂಮ್ ಗಳಲ್ಲಿ ಹೇರ್ ಡ್ರೈಯರ್, ಡಿಜಿಟಲ್ ಟಿವಿ ಬಾಕ್ಸ್ ಗಳಲ್ಲಿ ಸ್ಪೈಕ್ಯಾಮೆರಾ ಅಳವಡಿಸಲಾಗಿತ್ತು. ಈ 42 ರೂಮ್ ಗಳಲ್ಲಿ ನಡೆಯುವ ದೃಶ್ಯಗಳನ್ನು ವೆಬ್ ಸೈಟ್ ವೊಂದು ತನ್ನ 4000 ಗ್ರಾಹಕರಿಗೆ 24 ಗಂಟೆಗಳ ಕಾಲ ಲೈವ್ ಮಾಡಿದೆ. ಈ ಲೈವ್ ವಿಡಿಯೋಗಾಗಿ ಗ್ರಾಹಕರು ಪ್ರತಿ ತಿಂಗಳು 50 ಸಾವಿರ ವೊನ್ ಪಾವತಿಸಿದ್ದಾರೆ. ಕಳೆದ ಮೂರು ತಿಂಗಳಿಂದ ಸುಮಾರು 800 ದಂಪತಿ ಸೆಕ್ಸ್ ನಲ್ಲಿ ತೊಡಗಿದ್ದನ್ನು ವೆಬ್ ಸೈಟ್ ಮೂಲಕ ಲೈವ್ ಮಾಡಲಾಗಿದೆ.

ಸಂಗ್ರಹ ಚಿತ್ರ

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img