Sunday, June 13, 2021
Homeಜಿಲ್ಲೆಬೆಳಗಾವಿಹೋಳಿ ಹಬ್ಬಕ್ಕಿಲ್ಲ ಭಾಷಾ ವೈಷಮ್ಯ – ಬೆಳಗಾವಿಯಲ್ಲಿ ಬಣ್ಣದ ಹಬ್ಬದಲ್ಲಿ ಮಿಂದೆದ್ದ ಜನತೆ

ಇದೀಗ ಬಂದ ಸುದ್ದಿ

ಹೋಳಿ ಹಬ್ಬಕ್ಕಿಲ್ಲ ಭಾಷಾ ವೈಷಮ್ಯ – ಬೆಳಗಾವಿಯಲ್ಲಿ ಬಣ್ಣದ ಹಬ್ಬದಲ್ಲಿ ಮಿಂದೆದ್ದ ಜನತೆ

ಬಣ್ಣದ ಹಬ್ಬ ಹೋಳಿಯನ್ನು ಬೆಳಗಾವಿ ನಗರದಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ನಗರದ ವಿವಿಧ ಪ್ರದೇಶಗಳಲ್ಲಿ ಮಕ್ಕಳು ,ಮಹಿಳೆಯರು, ಯುವಕರು, ಹಿರಿಯರೆಲ್ಲ ಸೇರಿ ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಬಿಸಿಲಿನ ಝಳಕ್ಕೆ ಬೆಂದ ಜನರಿಗೆ ಅಲ್ಲಲ್ಲಿ ರೇನ್ ಡಾನ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ತಮ್ಮ ನೆಚ್ಚಿನ ಹಾಡುಗಳಿಗೆ ಕುಣಿಯುತ್ತ ಮಳೆಯಂತೆ ಸುರಿಯುತ್ತಿದ್ದ ನೀರಿನಲ್ಲಿ ಎಲ್ಲ ವಯಸ್ಸಿನವರು ಕುಣಿದು ಕುಪ್ಪಳಿಸಿದರು.

ಹೋಳಿ ನಿಮಿತ್ತ ರಾಜಕಾರಣಿಗಳು ಕೂಡ ಹಲವು ಕಾರ್ಯಗಳನ್ನು ಆಯೋಜಿಸಿದ್ದರು . “ಉಮನಿಯಾ ಹೋಳಿ” ಹೆಸರಿನಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಕೇವಲ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದ್ರು. ಅತ್ತ ಶಾಸಕ ಅಭಯ ಪಾಟೀಲ್ “ಹೋಳಿ ಮಿಲನ್” ಹೆಸರಿನಲ್ಲಿ ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ನಗರದಲ್ಲಿ ಪೋಲಿಸ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಜಾತಿ, ಭಾಷಾ ವೈಷಮ್ಯ ಮರೆತು ಬೆಳಗಾವಿ ಜನತೆ ಒಂದಾಗಿ ಸಂಭ್ರಮಿಸಿದ್ದು ವಿಶೇಷವಾಗಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img