Saturday, July 31, 2021
Homeರಾಜಕೀಯಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರ್ತೀನಿ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ

ಇದೀಗ ಬಂದ ಸುದ್ದಿ

ಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರ್ತೀನಿ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯಲ್ಲಿ ಇಂದು ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ರು. ಮಂಡ್ಯದ ಬಸರಾಳು ಹೋಬಳಿಯಲ್ಲಿ ಮಾತನಾಡಿದ ನಿಖಿಲ್  ಸೋಲಲಿ ಗೆಲ್ಲಲಿ ಮಂಡ್ಯದಲ್ಲೇ ಇರುತ್ತೇನೆ ಎಂದು ಹೇಳಿದ್ದಾರೆ. ನಾನು ಹೋದ ಕಡೆ ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ತುಂಬಾ ಖುಷಿಯಿಂದ ಜನ ಸ್ವಾಗತ ಮಾಡುತ್ತಿದ್ದಾರೆ. ಕುಮಾರಣ್ಣ ಮತ್ತು ದೇವೇಗೌಡರ ಮೇಲೆ ಇಟ್ಟಿರುವ ನಂಬಿಕೆಯನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ರು.  ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದೆ. ಆದರೆ ನಮ್ಮ ಪಕ್ಷದ ವರಿಷ್ಠರು ಮತ್ತು ಕಾರ್ಯಕರ್ತರು 25 ರಂದೇ ನಾಮಪತ್ರ ಸಲ್ಲಿಸಲು ಹೇಳಿದ್ರು. ಹೀಗಾಗಿ ನಾಮಪತ್ರ ಸಲ್ಲಿಕೆಯನ್ನು ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದ್ರು. ರಾಜಕೀಯದಲ್ಲಿ ಜನರ ತೀರ್ಪೇ ಅಂತಿಮ ಎಂದು ಹೇಳಿದ್ರು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img