Thursday, September 23, 2021
Homeಜಿಲ್ಲೆಭಾರತದಲ್ಲಿ ಇನ್ನೊಂದು ದಾಳಿ ನಡೆದ್ರೆ ಗ್ರಹಚಾರ ನೆಟ್ಟಗಿರಲ್ಲ – ಟ್ರಂಪ್ ಎಚ್ಚರಿಕೆ

ಇದೀಗ ಬಂದ ಸುದ್ದಿ

ಭಾರತದಲ್ಲಿ ಇನ್ನೊಂದು ದಾಳಿ ನಡೆದ್ರೆ ಗ್ರಹಚಾರ ನೆಟ್ಟಗಿರಲ್ಲ – ಟ್ರಂಪ್ ಎಚ್ಚರಿಕೆ

ಪುಲ್ವಾಮಾ ಉಗ್ರ ದಾಳಿ ಬಳಿಕ ಜಾಗತಿಕ ಮಟ್ಟದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿರುವ ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಇನ್ನೊಂದು ಉಗ್ರ ದಾಳಿ ನಡೆದಿದ್ದೇ ಆದಲ್ಲಿ ಪಾಕಿಸ್ತಾನದ ಗ್ರಹಚಾರ ನೆಟ್ಟಗಿರಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಶ್ವೇತಭವನ ಪತ್ರಿಕಾ ಪ್ರಕಟಣೆಯಲ್ಲಿ ಪಾಕಿಸ್ತಾನಕ್ಕೆ ಈ ಎಚ್ಚರಿಕೆ  ನೀಡಿದೆ. ಪಾಕಿಸ್ತಾನ ಮತ್ತೆ ತನ್ನ ಬಾಲ ಬಿಚ್ಚಿದಲ್ಲಿ ಭಾರತ ಅತ್ಯಂತ ಪರಿಣಾಮಕಾರಿ ಪ್ರತ್ಯುತ್ತರ ನೀಡೋದು ನಿಶ್ಚಿತ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ಅಮೆರಿಕ ರವಾನಿಸಿದೆ.

ಉಗ್ರರ ಶಮನ ಮಾಡುವ ನಿಟ್ಟಿನಲ್ಲಿ ಪಾಕ್ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎನ್ನುವುದನ್ನ ನಾವು ಗಮನಿಸುತ್ತಿದ್ದೇವೆ. ಇಲ್ಲವಾದಲ್ಲಿ ಮತ್ತೆ ಉಗ್ರ ಚಟುವಟಿಕೆಗಳು ಕಾಣಿಸಿಕೊಳ್ಳುತ್ತವೆ ಎಂದು ಶ್ವೇತಭವನ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img