Tuesday, January 26, 2021
Home ಜಿಲ್ಲೆ ಧಾರವಾಡ ಬೆಳ್ಳಂಬೆಳಗ್ಗೆ ನಶೆಯಲ್ಲಿ ತೇಲಾಡೋ ವಿದ್ಯಾರ್ಥಿಗಳು, ಇಲ್ಲಿ ನಿಮ್ಮ ಮಕ್ಕಳು ಇದ್ದಾರಾ...?

ಇದೀಗ ಬಂದ ಸುದ್ದಿ

ಬೆಳ್ಳಂಬೆಳಗ್ಗೆ ನಶೆಯಲ್ಲಿ ತೇಲಾಡೋ ವಿದ್ಯಾರ್ಥಿಗಳು, ಇಲ್ಲಿ ನಿಮ್ಮ ಮಕ್ಕಳು ಇದ್ದಾರಾ…?

ಹುಬ್ಬಳ್ಳಿಯಲ್ಲಿ ಗಾಂಜಾ ಮಾರಾಟ ದಂಧೆ ಎಗ್ಗಿಲ್ಲದೆ ಸಾಗಿದೆ. ವಿದ್ಯಾರ್ಥಿಗಳೇ ಇವರ ಟಾರ್ಗೆಟ್. ನಗರದ ಹಳೇ ಹುಬ್ಬಳ್ಳಿ ,ವಿದ್ಯಾನಗರ, ಕೇಶ್ವಾಪುರ, ಸೆಟ್ಲಿಮೆಂಟ್, ಹೊಸೂರ, ಹೀಗೆ ಹಲವಾರು ಕಡೆ ಗಾಂಜಾ ಮಾರಾಟಗಾರರ ಜಾಲ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ. 100, 200,300,ರೂಪಾಯಿ ಲೆಕ್ಕದಲ್ಲಿ ಸಣ್ಣ ಸಣ್ಣ ಪಾಕೆಟ್ ಮಾಡಿ ಯುವಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನೀಡ್ತಾರೆ.  ಪೊಲೀಸರು ಇವರಿಗೆ ಪರೋಕ್ಷ ಬೆಂಬಲ ನೀಡಿ ಈ ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಒಂದೊಂದು ಏರಿಯಾದಲ್ಲಿ ಒಂದೊಂದು ಟೈಮ್ ನಲ್ಲಿ ಗಾಂಜಾ ಮಾರಾಟ ಮಾಡಲಾಗುತ್ತೆ. ಇನ್ನು ಇಲ್ಲಿನ ವಿದ್ಯಾರ್ಥಿಗಳನ್ನ ಕೇಳ್ಬೇಕಾ ? ಗಾಂಜಾವ್ಯಸನಿ ವಿದ್ಯಾರ್ಥಿಗಳು ಬೆಳಿಗ್ಗೆಯಿಂದಲೇ ಗಾಂಜಾಗೋಸ್ಕರ ಕಾಯುತ್ತಿದ್ದಾರೆ. ಶಾಲೆ ಆರಂಭಕ್ಕೂ ಮುನ್ನ ನಶೆಯಲ್ಲಿ ತೇಲಾಡ್ತಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದೊಂದು ಯುವ ಜನತೆ ಹಾದಿ ತಪ್ಪೋದ್ರಲ್ಲಿ ಸಂಶಯವಿಲ್ಲ.

TRENDING