ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸದಿದ್ದರೂ ನಾನು ಪ್ರಧಾನಿ ಅಭ್ಯರ್ಥಿ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸದೇ ತಾವು ಪ್ರಧಾನಿಯಾಗೋ ಬಗ್ಗೆ ಮಾಯಾವತಿ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿ ನಾನು 1995ರಲ್ಲಿ ಆಯ್ಕೆಯಾಗಿದ್ದೆ. ಆಗ ನಾನು ವಿಧಾನಸಭೆಗೆ ಸ್ಫರ್ಧಿಸಿರಲಿಲ್ಲ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಫರ್ಧಿಸಬಾರದು ಎಂಬ ನನ್ನ ನಿರ್ಧಾರವನ್ನ ನಿರಾಶೆಗೊಳಿಸಬೇಡಿ ಅಂತ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
