Thursday, September 23, 2021
Homeರಾಜಕೀಯಸುಮಲತಾ ಆಸ್ತಿ ಘೋಷಣೆ – ಅಂಬಿಗಿಂತ ಪತ್ನಿ ಶ್ರೀಮಂತೆ..!

ಇದೀಗ ಬಂದ ಸುದ್ದಿ

ಸುಮಲತಾ ಆಸ್ತಿ ಘೋಷಣೆ – ಅಂಬಿಗಿಂತ ಪತ್ನಿ ಶ್ರೀಮಂತೆ..!

ಲೋಕಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದ ಸುಮಲತಾ ಅಂಬರೀಶ್​ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು, ಸುಮಲತಾ ಅಮರನಾಥ್ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

ಸುಮಲತಾ ಒಟ್ಟು 42.49 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ವಿವಿಧ ಬ್ಯಾಂಕ್​ಗಳಲ್ಲಿ 2 ಕೋಟಿ ಹಣ ಠೇವಣಿ ಇಟ್ಟಿದ್ದಾರೆ.  2 ಹೆಚ್​ಡಿಎಫ್​ಸಿ​ ಬ್ಯಾಂಕ್ ಅಕೌಂಟುಗಳಲ್ಲಿ ತಲಾ 32,34,964 ರೂ, 1,95,000 ರೂ. ಸಿಟಿ ಬ್ಯಾಂಕ್​ನಲ್ಲಿ 57,85,694 ರೂ. 2 ಎಸ್​ಬಿಐ ಅಕೌಂಟುಗಳಲ್ಲಿ 12,70,363 ರೂ. ಹಣವಿರುವುದಾಗಿ ಅಫಿಡವಿಟ್​​ನಲ್ಲಿ ಘೋಷಿಸಿದ್ದಾರೆ. ಬ್ಯಾಂಕುಗಳಲ್ಲಿ ಶೇರುಗಳು ಮತ್ತು ಬಾಂಡ್ ರೂಪದಲ್ಲಿ ವಿಜಯಾ ಬ್ಯಾಂಕಲ್ಲಿ 38,975 ರೂ. ಹಾಗೂ ಹೆಚ್​ಡಿಎಫ್​ಸಿ ಬ್ಯಾಂಕಿನ 2 ಪೆನ್ಷನ್ ಪ್ಲ್ಯಾನ್​ಗಳಲ್ಲಿ ತಲಾ 3 ಲಕ್ಷ, 75 ಲಕ್ಷ ರೂ ಹೂಡಿಕೆ ಮಾಡಿದ್ದಾರೆ.

ಅಂಬರೀಶ್ ಖಾತೆಯಲ್ಲಿ 82 ಲಕ್ಷ ಇರೋದಾಗಿ ತಿಳಿಸಿದ್ದಾರೆ. ಇನ್ನು 1.66 ಕೋಟಿ ರೂ ಮೌಲ್ಯದ 5.6 ಚಿನ್ನವನ್ನ ಸುಮಲತಾ ಹೊಂದಿದ್ದಾರೆ. 18 ಕೋಟಿ ರೂ ಮೌಲ್ಯದ 3 ಮನೆ, ಜೊತೆಗೆ 16 ಕೋಟಿ ಪಿತ್ರಾರ್ಜಿತ ಆಸ್ತಿಯಿದೆ ಎಂದು ತಿಳಿಸಿದ್ದಾರೆ. ಇನ್ನು ಸುಮಲತಾಗೆ 1.42 ಕೋಟಿ ರೂಪಾಯಿ ಸಾಲ ಇದೆ. 39 ಲಕ್ಷ ರೂಪಾಯಿ ಹಣವನ್ನ ಮಗ ಅಭಿಷೇಕ್ ನೀಡಿರೋದಾಗಿ ನಾಮಪತ್ರದಲ್ಲಿ ಸುಮಲತಾ ಘೋಷಣೆ ಮಾಡಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img