Tuesday, January 19, 2021
Home ದೇಶ ವಿಶ್ವಾಸ ಮತ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್

ಇದೀಗ ಬಂದ ಸುದ್ದಿ

ವಿಶ್ವಾಸ ಮತ ಗೆದ್ದ ಗೋವಾ ಸಿಎಂ ಪ್ರಮೋದ್ ಸಾವಂತ್

ಗೋವಾ ವಿಧಾನಸಭೆಯಲ್ಲಿ ನಡೆದ ಅಗ್ನಿ ಪರೀಕ್ಷೆಯಲ್ಲಿ ನೂತನ ಸಿಎಂ ಪ್ರಮೋದ್ ಸಾವಂತ್ ಗೆಲುವು ಸಾಧಿಸಿದ್ದಾರೆ. ಗೋವಾ ವಿಧಾನಸಭೆಯಲ್ಲಿ ನಡೆದ ವಿಶ್ವಾಸ ಮತದಲ್ಲಿ ಸಿಎಂ ಪ್ರಮೋದ್ ಸಾವಂತ್ ಸರ್ಕಾರಕ್ಕೆ 20 ಶಾಸಕರು ಬೆಂಬಲ ಘೋಷಿಸಿದ್ದಾರೆ.  ಈ ಮೂಲಕ ಪ್ರಮೋದ್ ಸಾವಂತ್ ಸರ್ಕಾರ ಸುಭದ್ರವಾಗಿದೆ. 

ಬಿಜೆಪಿ ನೇತೃತ್ವದ ಮೈತ್ರಿಕೂಟಕ್ಕೆ ಒಟ್ಟು 20 ಶಾಸಕರು ಬೆಂಬಲ ನೀಡಿದ್ದಾರೆ. ಬಿಜೆಪಿಯ 11, ಮಿತ್ರಪಕ್ಷಗಳಾದ ಜಿಎಫ್ ಪಿ, ಎಂಜಿಪಿ ತಲಾ ಮೂರು ಶಾಸಕರು ಮತ್ತು ಮೂವರು ಪಕ್ಷೇತರ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ಅಂತೆಯೇ ಓರ್ವ ಬಿಜೆಪಿ ಶಾಸಕ ಅನಾರೋಗ್ಯದಿಂದ ವಿಶ್ವಾಸಮತ ಯಾಚನೆಗೆ ಗೈರಾಗಿದ್ದು, ಗೈರಾದ ಶಾಸಕನನ್ನು ಪಾಂಡುರಂಗ ಮಡ್ಕೈಕರ್ ಎನ್ನಲಾಗಿದೆ. ಬಿಜೆಪಿಯ ಸಿಎಂ ಮನೋಹರ್ ಪರಿಕ್ಕರ್ ನಿಧನಹೊಂದಿದ್ರೆ ಇನ್ನೋರ್ವ ಶಾಸಕ ಫ್ರಾನ್ಸಿಸ್ ಡಿಸೋಜಾ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರಾದ ಸುಭಾಷ್ ಶಿರೋಡ್ಕರ್ ಹಾಗೂ ದಯಾನಂದ್ ಸೊಪ್ಚೆ  ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಗೋವಾ ವಿಧಾನಸಭೆ ಸದಸ್ಯ ಬಲ ಇದೀಗ 36ಕ್ಕೆ ಕುಸಿದಿದೆ. ಗೋವಾ ವಿಧಾನಸಭೆಯ ಸದಸ್ಯ ಬಲ 36ಕ್ಕೆ ಕುಸಿದಿದ್ದು, ಬಹುಮತ ಸಾಬೀತಿಗೆ 19 ಶಾಸಕರ ಬೆಂಬಲ ಬೇಕಿತ್ತು.

TRENDING