Sunday, December 6, 2020
Home ದೇಶ ದೇಶದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ – ರೈಲ್ವೇ ಹೆಲ್ಪರ್ ಹುದ್ದೆಗೆ ಇಂಜಿನಿಯರ್, ಸ್ನಾತಕೋತ್ತರ ಪದವೀಧರರು ಅರ್ಜಿ...

ಇದೀಗ ಬಂದ ಸುದ್ದಿ

ವಿಶ್ವದಾದ್ಯಂತ 6.66 ಕೋಟಿ ಗಡಿಯತ್ತ ತಲುಪಿದ ಕೊರೋನಾ...

ನ್ಯೂಯಾರ್ಕ್; ವಿಶ್ವದಾದ್ಯಂತ ಮಹಾಮಾರಿ ಕೊರೋನಾ ವೈರಸ್ ಅಬ್ಬರ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 6.66 ಕೋಟಿ ಗಡಿಯತ್ತ ಸಾಗಿದೆ. ಪ್ರಸ್ತುತ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಒಟ್ಟಾರೆ ಸೋಂಕಿತರ...

ಸಿಎಂ ನಿವಾಸಕ್ಕೆ ಮುತ್ತಿಗೆ ಯತ್ನ; ಕರವೇ ರಾಜ್ಯಾಧ್ಯಕ್ಷ...

ಬೆಂಗಳೂರು: ಮರಾಠಾ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಅಲ್ಲಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆಗಳು ತೀವ್ರ ಸ್ವರೂಪ...

ತಮಿಳುನಾಡು ದಕ್ಷಿಣ ಕರಾವಳಿಯಲ್ಲಿ ಕಳೆದ 30 ಗಂಟೆಗಳಿಂದ...

ಚೆನ್ನೈ: ವಾಯುಭಾರ ಕುಸಿತವಾಗಿ ದುರ್ಬಲಗೊಂಡಿರುವ 'ಬುರೆವಿ' ಚಂಡಮಾರುತ ತಮಿಳುನಾಡು ದಕ್ಷಿಣ ಕರಾವಳಿಯ ರಾಮನಾಥಪುರಂ ಜಿಲ್ಲೆಯ ಸಮೀಪದಲ್ಲಿ ಕಳೆದ 30 ಗಂಟೆಗಳಿಂದ ಸ್ಥಿರವಾಗಿದೆ ಎಂದು ಹವಾಮಾನ ಇಲಾಖೆ ಕಚೇರಿ ತನ್ನ ಮಾಹಿತಿ...

ಕರ್ನಾಟಕ ಬಂದ್: ಟೌನ್‌ಹಾಲ್‌ ಬಳಿ ಪ್ರತಿಭಟನಾಕಾರರನ್ನು ವಶಕ್ಕೆ...

ಬೆಂಗಳೂರು, ಡಿ. 05: ಮರಾಠ ನಿಗಮ ಮಂಡಳಿಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಇಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ. ಟೌನ್‌ಹಾಲ್ ಬಳಿ ಪ್ರತಿಭಟನೆ ಆರಂಭವಾಗಿದೆ, ಈ...

ಚಾರ್ಮಾಡಿ ಘಾಟ್ ನಲ್ಲಿ 150 ಅಡಿ ಪ್ರಪಾತಕ್ಕೆ...

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರೊಂದು 150 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿರುವ ಘಟನೆ ಚಾರ್ಮಡಿ ಘಾಟ್ ನ ಬಿದರತಳದಲ್ಲಿ ನಡೆದಿದೆ. ಸರಿಯಾಗಿ ರಸ್ತೆ ಮಾರ್ಗ ಕಾಣದೇ...

ದೇಶದಲ್ಲಿ ಹೆಚ್ಚಿದ ನಿರುದ್ಯೋಗ ಸಮಸ್ಯೆ – ರೈಲ್ವೇ ಹೆಲ್ಪರ್ ಹುದ್ದೆಗೆ ಇಂಜಿನಿಯರ್, ಸ್ನಾತಕೋತ್ತರ ಪದವೀಧರರು ಅರ್ಜಿ !

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಅದೆಷ್ಟೋ ಯುವಕರು ಕೆಲಸಕ್ಕಾಗಿ ಅಲೆದಾಡುತ್ತಿದ್ದಾರೆ. ಇವರಲ್ಲಿ ಇಂಜಿನಿಯರ್  ಗಳು, ಪದವೀಧರರು, ಸ್ನಾತಕೋತ್ತರ ಪದವೀಧರರು ಸೇರಿದ್ದಾರೆ. ಇದಕ್ಕೆ ಪೂರಕವೆಂಬಂತೆ ಕೆಲ ದಿನಗಳ ಹಿಂದೆ ರೈಲ್ವೇ ಇಲಾಖೆ ಕರೆದಿದ್ದ ಹೆಲ್ಪರ್ ಹುದ್ದೆಗೆ ಬಂದಿದ್ದ ಅರ್ಜಿಯನ್ನ ಕಂಡು ರೈಲ್ವೇ ಅಧಿಕಾರಿಗಳೇ ಬೆಚ್ಚಿ  ಬಿದ್ದಿದ್ದಾರೆ. ರೈಲ್ವೇ ಇಲಾಖೆಯ 62, 907 ಹುದ್ದೆಗೆ ಸುಮಾರು 2 ಕೋಟಿಯಷ್ಟು ಯುವಕರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ಹೆಲ್ಪರ್, ಟ್ರ್ಯಾಕ್ ಮೆನ್ ಹುದ್ದೆಗೆ 82 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಅನೇಕರು ಇಂಜಿನಿಯರಿಂಗ್, ಬಿಎಸ್ಸಿ, ಸ್ನಾತಕೋತ್ತಕ ಪದವೀಧರರಾಗಿದ್ದಾರೆ.  ಹೆಲ್ಪರ್ ಹುದ್ದೆಗೆ  ಎಸ್ ಎಸ್ ಎಲ್ ಸಿ, ಐಟಿಐ ಆದವರಿಗೆ ಅರ್ಜಿ ಸಲ್ಲಿಸಲು ಕೋರಲಾಗಿತ್ತು.

ಪ್ರತಿ ವರ್ಷ ಭಾರತದಲ್ಲಿ ಕೋಟ್ಯಂತರ ಮಂದಿ ವಿದ್ಯಾರ್ಥಿಗಳು ಪದವಿ ಮುಗಿಸುತ್ತಿದ್ದಾರೆ.  ಇವರಲ್ಲಿ ಕೆಲಸ ಸಿಗೋದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಅದರಲ್ಲೂ ಹಳ್ಳಿಗಳಲ್ಲಿ ಯುವಕರು ಕೆಲಸವಿಲ್ಲದೆ ಕೂಲಿ ಕೆಲಸಗಳಲ್ಲಿ ತೊಡಗುತ್ತಿದ್ದಾರೆ. ಅಧಿಕಾರಕ್ಕೆಬಂದ ಸರ್ಕಾರಗಳು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲಾಗುವುದು ಎಂದು ಆರಂಭಶೂರತ್ವ ಪ್ರದರ್ಶಿಸುತ್ತವೆ. ದಿನಗಳೆದಂತೆ ದೇಶದ ಬೆನ್ನೆಲುಬಾಗಿರುವ ಯುವಕರನ್ನೇ ಮರೆತುಬಿಡುತ್ತವೆ.

ಉತ್ಪಾದನಾ ವಲಯದಲ್ಲಿ ಭಾರತ ಸುಧಾರಿಸಿಕೊಳ್ಳದಿದ್ದರೆ ನಿರುದ್ಯೋಗ ಸಮಸ್ಯೆ ಮಿತಿ ಮೀರಬಹುದು ಎಂದು ನೊಬೆಲ್‌ ಪುರಸ್ಕೃತ ಆರ್ಥಿಕ ತಜ್ಞ ಪಾಲ್‌ ಕ್ರುಗ್ಮನ್‌ ಈಗಾಗಲೇ ಎಚ್ಚರಿಸಿದ್ದಾರೆ. 

2017-18ರಲ್ಲಿ  ಭಾರತದ ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲೇ ಅತ್ಯಧಿಕ ಮಟ್ಟಕ್ಕೇರಿದೆ ಎನ್ನಲಾಗಿದೆ. 1972-73ರ ಬಳಿಕ ನಿರುದ್ಯೋಗದ ಪ್ರಮಾಣವು ಶೇ.6.1ಕ್ಕೆ  ತಲುಪಿರುವುದು ಇದೇ ಮೊದಲು. ನಗರಪ್ರದೇಶಗಳಲ್ಲಿ  ನಿರುದ್ಯೋಗವು ಶೇ.7.8ರಷ್ಟಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ  ಶೇ.5.3ರಷ್ಟಿದೆ. ಇದು ಆಘಾತಕಾರಿ ಬೆಳವಣಿಗೆಯಾಗಿದೆ.

ನಿರುದ್ಯೋಗ ಸಮಸ್ಯೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರಗಳು ಆದಷ್ಟು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಒತ್ತು ನೀಡಿದ್ರೆ ಒಳಿತು. ಇಲ್ಲವಾದ್ರೆ ನಮ್ಮ ಯುವಕರು ದಾರ ತಪ್ಪುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ದೇಶದ ಆರ್ಥಿಕ ಪ್ರಗತಿಗೂ ಮಾರಕವಾಗಿದೆ. 

TRENDING