ಆಕಾಶದಲ್ಲಿ ದೊಡ್ಡ ರಂಧ್ರ ಬಿದ್ದಂತೆ ಕಾಣೋ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅಂದ್ ಹಾಗೇ ಇದು ಕಂಡು ಬಂದಿದ್ದು ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ. ಹವಾಮಾನ ತಜ್ಞ ಹಾಗೂ ಖಗೋಳಶಾಸ್ತ್ರಜ್ಞ ಇಬ್ರಾಹಿಂ ಅಲ್ ಜಾರ್ವಾನ್ ಈ ವಿಡಿಯೋವನ್ನ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ರಂಧ್ರ ಹಾರುವ ತಟ್ಟೆ ಇರಬಹುದು ಎನ್ನಲಾಗಿದೆ. ತಜ್ಞರು ಹೇಳುವ ಪ್ರಕಾರ ಇದನ್ನು ಫಾಲ್ಸ್ಟ್ರೀಕ್ ಹೋಲ್ ಎನ್ನಲಾಗುತ್ತೆ. ಮೋಡಗಳಲ್ಲಿರುವ ನೀರಿನ ತಾಪಮಾನ ಫ್ರೀಜಿಂಗ್ ಲೆವೆಲ್ಗಿಂತ ಕಡಿಮೆ ಇದ್ದಾಗ ಅದು ಐಸ್ ಆಗಿರುವುದಿಲ್ಲ. ಆಗ ಆ ರೀತಿ ಫಾಲ್ಸ್ಟ್ರೀಕ್ ಆಗುತ್ತೆ. ಇವು ಸುಮಾರು 50 ಕಿ.ಮೀವರೆಗೆ ಚಾಚಬಹುದು. ಜನ ಈ ಬಗ್ಗೆ ಆತಂಕಪಡೋ ಅಗತ್ಯವಿಲ್ಲ ಎಂಬುದು ತಜ್ಞರು ಅಭಿಮತ.
