Tuesday, September 21, 2021
Homeದೇಶಅರುಣಾಚಾಲ ಪ್ರದೇಶ ಸಿಎಂ ಕುಟುಂಬಕ್ಕೆ 3 ಟಿಕೆಟ್ – ಬಿಜೆಪಿಯಲ್ಲೂ ಕುಟುಂಬ ರಾಜಕಾರಣ !

ಇದೀಗ ಬಂದ ಸುದ್ದಿ

ಅರುಣಾಚಾಲ ಪ್ರದೇಶ ಸಿಎಂ ಕುಟುಂಬಕ್ಕೆ 3 ಟಿಕೆಟ್ – ಬಿಜೆಪಿಯಲ್ಲೂ ಕುಟುಂಬ ರಾಜಕಾರಣ !

ಈಶಾನ್ಯ ಭಾರತದಲ್ಲಿ ಸರ್ಕಾರ ರಚನೆ ಮಾಡುವ ಮೂಲಕ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿದ್ದ ಬಿಜೆಪಿಗೆ ಇದೀಗ ಭಾರಿ ಹಿನ್ನಡೆಯಾಗಿದೆ. ಲೋಕಸಭಾ ಚುನಾವಣೆಯಲ್ಲಿನ ಟಿಕೆಟ್ ಹಂಚಿಕೆ ಸಂಬಂಧ ಭುಗಿಲೆದ್ದಿರುವ ಭಿನ್ನಮತದಲ್ಲಿ ಕೇವಲ ಒಂದು ವಾರದಲ್ಲಿ 25 ಮುಖಂಡರು ಬಿಜೆಪಿಗೆ ರಾಜಿನಾಮೆ ನೀಡಿದ್ದಾರೆ. ಬಿಜೆಪಿ ಸರ್ಕಾರದ ಇಬ್ಬರು ಸಚಿವರು, ಆರು ಶಾಸಕರು ಸೇರಿದಂತೆ ಪಕ್ಷದ 18 ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ಬಿಜೆಪಿಗೆ ಬಹುದೊಡ್ಡ ಆಘಾತ ನೀಡಿದ್ದಾರೆ. ಮುಖ್ಯಮಂತ್ರಿ ಕುಟುಂಬಕ್ಕೆ ಮೂರು ಟಿಕೆಟ್ ನೀಡಿರುವುದೇ ಪಕ್ಷದಲ್ಲಿನ ಅಸಮಾಧಾನಕ್ಕೆ ಕಾರಣವಾಗಿದೆ. ಈ ಮೂಲಕ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ ಎಂಬುದು ಸಾಬೀತಾಗಿದೆ.

ಏಪ್ರಿಲ್​ 11ರಂದು ಲೋಕಸಭಾ ಚುನಾವಣೆ ಜೊತೆಗೆ ಅರುಣಾಚಲಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿಯೇ ನಾಯಕರು ನೀಡಿರುವ ರಾಜೀನಾಮೆಯಿಂದ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. 

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img