Thursday, November 26, 2020
Home ಜಿಲ್ಲೆ ಬೆಂಗಳೂರು ಜೆಡಿಎಸ್ ಮುಖಂಡನಿಂದ 600 ಕೋಟಿ ವಂಚನೆ

ಇದೀಗ ಬಂದ ಸುದ್ದಿ

ಮಹಾಮಾರಿ ಕೊರೊನಾಗೆ ಸುಡಾನ್ ಮಾಜಿ ಪ್ರಧಾನಿ `ಸಾದಿಕ್...

ಜಗತ್ತನ್ನೇ ನರಳಿಸುತ್ತಿರುವ ಕೊರೊನಾ ಸೋಂಕಿನ ಎದುರು ಎಂತಹ ನಾಯಕನಾದರೂ ಮಂಡಿಯೂರಬೇಕು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಸುಡಾನ್‌ನ ಮಾಜಿ ಪ್ರಧಾನಿ ಸಾದಿಕ್ ಅಲ್-ಮೆಹ್ದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. 84 ವರ್ಷದ ಮೆಹ್ದಿ...

ಸ್ಟೀಮರ್​ ಬೋಟ್​ನಿಂದ 8 ಟ್ರಕ್ ನದಿ ಪಾಲು

ಕೋಲ್ಕತ: ಸೋಮವಾರ ದೊಡ್ಡ ಸ್ಟೀಮರ್​ ಬೋಟ್​ನಿಂದ ಆಕಸ್ಮಿಕವಾಗಿ ನದಿ ಪಾಲಾಗಿದ್ದ ಕಾರ್ಮಿಕರು ಮತ್ತು 8 ಟ್ರಕ್​ಗಳಲ್ಲಿ ಈವರೆಗೆ ಎರಡು 3 ಟ್ರಕ್​ ಅನ್ನು ಹೊರತೆಗೆಯಲಾಗಿದ್ದು, ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ.

ಕೆನರಾ ಬ್ಯಾಂಕ್ ನೇಮಕಾತಿ: ಸ್ಪೆಷಲಿಸ್ಟ್ ಅಧಿಕಾರಿ ಹುದ್ದೆಗೆ...

 ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಕೆನೆರಾ ಬ್ಯಾಂಕ್ ಸಿಹಿಸುದ್ದಿ ನೀಡಿದ್ದು, 220 ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆ ಹೆಸರು: ಕೆನರಾ ಬ್ಯಾಂಕ್ ಸ್ಪೆಷಲಿಸ್ಟ್...

ಫೋಟೋ ವೈರಲ್ : ಮಗಳ ಜೊತೆ ಹೆಜ್ಜೆ...

 'ತಾಯಿಗೆ ತಕ್ಕ ಮಗ' ಚಿತ್ರದ ಬಳಿಕ ಅಜಯ್ ರಾವ್ ನಟನೆಯ ಯಾವ ಚಿತ್ರವೂ ಇನ್ನು ಥಿಯೇಟರ್‌ಗೆ ಬಂದಿಲ್ಲ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿದ್ದು, ಚಿತ್ರೀಕರಣ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ.

‘ಪ್ಲಾಸ್ಮಾ’ ದಾನ ಮಾಡಿ 350 ರೋಗಿಗಳ ಜೀವ...

ನವದೆಹಲಿ: ಇವರು ಮಾಡಿರುವ ಕೆಲಸ ಹೊಗಳಿಕೆಗೂ ಮೀರಿದ್ದು, ಏಕೆಂದರೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಪ್ಲಾಸ್ಮಾ ದಾನ ಮಾಡುವ ಮೂಲಕ 350 ಮಂದಿಯ ಜೀವ ಉಳಿಸಿದ್ದಾರೆ. 42...

ಜೆಡಿಎಸ್ ಮುಖಂಡನಿಂದ 600 ಕೋಟಿ ವಂಚನೆ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದೆ. 600 ಕೋಟಿ ರೂಪಾಯಿ ಮೌಲ್ಯದ ಬೃಹತ್ ಹಗರಣ ಬಯಲಿಗೆ ಬಂದಿದೆ.  ಬಿಬಿಎಂಪಿ ಮಾಜಿ ಸದಸ್ಯ A. M. ಹನುಮಂತೇಗೌಡ ಮತ್ತು ಆತನ ಕುಟುಂಬಸ್ಥರಿಗೆ ಕಾನೂನು ಬಾಹಿರವಾಗಿ 600 ಕೋಟಿ ಮೌಲ್ಯದ 245 ಬದಲೀ ನಿವೇಶನಗಳ ಹಂಚಿಕೆ ಮಾಡಿರುವ ದಾಖಲೆಗಳು ಬಯಲಾಗಿವೆ.

ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಿಂದ JDS ಪಕ್ಷದಿಂದ ಕಳೆದ ಬಾರಿ ಪಾಲಿಕೆ ಸದಸ್ಯನಾಗಿದ್ದ ಹನುಮಂತೇಗೌಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಲಹಂಕ ಕ್ಷೇತ್ರದಿಂದ ಸ್ಪರ್ಧಿಸಿದ್ದರು.  ಶ್ಯಾಂ ಭಟ್ BDA ಆಯುಕ್ತರಾಗಿದ್ದ ಅವಧಿಯಲ್ಲಿ ಹನುಮಂತೇಗೌಡರ ಹೆಸರಿಗೆ 245 ಬದಲೀ ನಿವೇಶನಗಳ ಹಂಚಿಕೆ ಮಾಡಲಾಗಿದೆ ಎಂದು ಬಿಜೆಪಿ ನಾಯಕ ಎನ್ ಆರ್ ರಮೇಶ್ ಆರೋಪಿಸಿದ್ದಾರೆ.

ಹನುಮಂತೇಗೌಡ, ಆತನ ಪತ್ನಿ ಲತಾ, ತಾಯಿ ಲಕ್ಷ್ಮಮ್ಮ, ಅಣ್ಣ ನರಸಿಂಹ ಮೂರ್ತಿ, ಅತ್ತಿಗೆ ಚಂದ್ರಕಲಾ, ಭಾವ ಮೈದುನ ಶಿವಕುಮಾರ್ ಮತ್ತು ಮಾವ ರಂಗಸ್ವಾಮಿ ಹೆಸರುಗಳಿಗೆ 245 ಬದಲೀ ನಿವೇಶನಗಳ ಹಂಚಿಕೆ ಮಾಡಲಾಗಿದೆ. BDA ನಿರ್ಮಿಸಿರುವ HSR ಬಡಾವಣೆ, ಜ್ಞಾನಭಾರತಿ ಬಡಾವಣೆ, ಬನಶಂಕರಿ 6ನೇ ಹಂತ ಬಡಾವಣೆ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ 245 ಬದಲೀ ನಿವೇಶನಗಳ ಹಂಚಿಕೆ ಮಾಡಲಾಗಿದೆ.

ಹೊಸ ಬಡಾವಣೆಯ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುವ ಪ್ರದೇಶಗಳ ವಿವರಗಳನ್ನು BDA ಅಧಿಕಾರಿಗಳಿಂದ ಮೊದಲೇ ಸಂಗ್ರಹಿಸಿ, ಆ ಪ್ರದೇಶಗಳ ಭೂ ಮಾಲೀಕರ ದಿಕ್ಕು ತಪ್ಪಿಸಿ GPA ಮೂಲಕ ಸ್ವತ್ತುಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದರು. ಆ ನಂತರ ಆ ಸ್ವತ್ತುಗಳಿಗೆ ಶೇ. 50 : 50 ರ ಅನುಪಾತದಲ್ಲಿ ಅಭಿವೃದ್ಧಿಗೊಂಡ ನಿವೇಶನಗಳನ್ನು ಪರಿಹಾರದ ರೂಪದಲ್ಲಿ ಪಡೆಯುತ್ತಿದ್ದರು. ಪರಿಹಾರದ ರೂಪದ ನಿವೇಶನಗಳ ಬದಲಾಗಿ ಈಗಾಗಲೇ ಬಹಳಷ್ಟು ಅಭಿವೃದ್ಧಿಯಾಗಿರುವ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳನ್ನು “ಬದಲೀ ನಿವೇಶನ”ಗಳ ರೂಪದಲ್ಲಿ ಪಡೆದು ಭಾರೀ ವಂಚನೆ ನಡೆಸಿರುವುದು ದಾಖಲೆಗಳಲ್ಲಿ ಸಾಬೀತಾಗಿದೆ.

ಹನುಮಂತೇಗೌಡರ ಪ್ರಕರಣದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮತ್ತು ಬದಲಿ ನಿವೇಶನ ಹಂಚಿಕೆಯ ಯಾವುದೇ ಕಾನೂನುಗಳನ್ನು ಪಾಲಿಸಲಾಗಿಲ್ಲ.

ಉದಾಹರಣೆಗೆ :-

ವಿಶ್ವೇಶ್ವರಯ್ಯ ಬಡಾವಣೆ ನಿರ್ಮಾಣಕ್ಕೆಂದು ಅಧಿಸೂಚನೆ ಹೊರಡಿಸಿದ ನಂತರ, ಆ ಭಾಗದ ಸರ್ವೆ ನಂ : 83/A ಜಮೀನನ್ನು ಅದರ ಮಾಲೀಕ ಕುರಿ ಲಿಂಗಪ್ಪ ಎಂಬುವವರಿಂದ ಹನುಮಂತೇಗೌಡ ತನ್ನ ಪತ್ನಿ ಲತಾ ಅವರ ಹೆಸರಿಗೆ GPA ಮೂಲಕ ಕ್ರಯಪತ್ರವನ್ನು ಮಾಡಿಸಿಕೊಳ್ಳುತ್ತಾನೆ. ಆ ನಂತರ ತನ್ನ ಪತ್ನಿಯ ಹೆಸರಿನಿಂದ ಆ ಜಮೀನನ್ನು ತನ್ನ ಹೆಸರಿಗೆ ನೊಂದಣಿ ಮಾಡಿಸಿಕೊಳ್ಳುತ್ತಾನೆ.

ಆದರೆ, ವಿಶ್ವೇಶ್ವರಯ್ಯ ಬಡಾವಣೆಯ ಬದಲಾಗಿ – 1989 ರಲ್ಲಿ ಬಡಾವಣೆಯ ಸಮೀಕ್ಷೆ ನಡೆಸಿ ನಿರ್ಮಿಸಿರುವ ಜ್ಞಾನಭರತಿ 2ನೇ ಹಂತದ ವಲಗೇರಹಳ್ಳಿ ಸರ್ವೆ ನಂ : 26/03 ರಲ್ಲಿ 40 X 60 ಮತ್ತು 50 X 80 ಅಳತೆಯ 12 ನಿವೇಶನಗಳನ್ನು “ಬದಲೀ ನಿವೇಶನ” ಗಳ ಹೆಸರಿನಲ್ಲಿ ತನ್ನ ಹೆಸರಿಗೆ BDA ನಿಂದ ಪಡೆದುಕೊಳ್ಳುತ್ತಾನೆ !!! ಹಾಗೆಯೇ ಹೊರ ವರ್ತುಲ ರಸ್ತೆಯ ಹಲಗೆ ವಡೇರಹಳ್ಳಿಯಲ್ಲಿ 40 X 60 ಮತ್ತು 50 X 80 ಅಳತೆಗಳುಳ್ಳ 12 ನಿವೇಶನಗಳನ್ನು ತನ್ನ ಹೆಸರಿಗೆ ಪಡೆದುಕೊಳ್ಳುತ್ತಾನೆ !!! ಈ ಪ್ರಕರಣದಲ್ಲಿ ಪ್ರತಿಯೊಂದು ಹಂತದಲ್ಲೂ ನಿಯಮಗಳನ್ನು ಅತ್ಯಂತ ಸ್ಪಷ್ಟವಾಗಿ ಉಲ್ಲಂಘಿಸಿರುವುದು ಎಲ್ಲರ ಕಣ್ಣಿಗೆ ರಾಚುತ್ತದೆ !!!

•             BDA ಆಯುಕ್ತರಾಗಿದ್ದ IAS ಅಧಿಕಾರಿ ಶಾಂಭಟ್ ಸೇರಿದಂತೆ, 2013-14 ರಿಂದ 2016-17 ರ ವರೆಗೆ ಅಧಿಕಾರದಲ್ಲಿದ್ದ ಕಾರ್ಯದರ್ಶಿಗಳು, ಉಪಕಾರ್ಯದರ್ಶಿಗಳು (01, 02, 03, ಮತ್ತು 04), ಭೂಸ್ವಾಧೀನಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

TRENDING