ಚೌಕೀದಾರ್ ಚೌಕೀದಾರ್ ಎಂದು ಬೀಗುತ್ತಿರುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಾಲ್ ಕುಟುಕಿದ್ದಾರೆ. ಯಾರವರು ಸುಳ್ಳಿನ ಚೌಕೀದಾರ್ ಅಂತ ಪ್ರಶ್ನಿಸಿದ್ದಾರೆ. 15 ಲಕ್ಷ ಹಣವನ್ನ ಬ್ಯಾಂಕ್ ಅಕೌಂಟ್ ಗೆ ಹಾಕುತ್ತೇನೆ ಎಂದು ಭರವಸೆ ನೀಡಿದವರು. ಭಗತ್ ಸಿಂಗ್ ಅವರನ್ನ ಕಾಂಗ್ರೆಸ್ ನವರು ಭೇಟಿ ಮಾಡಲು ಹೋಗಿಲ್ಲ ಅಂತ ಸುಳ್ಳು ಆರೋಪ ಮಾಡಿದವರಾ ಅಂತ ಪ್ರಶ್ನಿಸಿದ್ದಾರೆ. ಸರ್ಕಾರದ 9 ಸಾವಿರ ಕೋಟಿ ಹಣ ಉಳಿಸಿದ್ದೀವಿ ಅಂತ ಸುಳ್ಳು ಹೇಳಿದವರು. ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರ ಬಗ್ಗೆ ಸುಳ್ಳು ಹೇಳಿಕೆ ನೀಡಿದವರು. Lie lama (ಸುಳ್ಳು ಲಾಮಾ ) ನಮ್ಮ ಚೌಕೀದಾರ್ ಅಂತ ಟ್ವೀಟರ್ ನಲ್ಲಿ ಕಾಲೆಳೆದಿದ್ದಾರೆ.

