Saturday, July 31, 2021
Homeದೇಶಸಾಲಮುಕ್ತಿಗೆ ನೆರವಾದ ಸಹೋದರ - ಅಣ್ಣ ತಮ್ಮ ಅಂದ್ರೆ ಹೀಗಿರಬೇಕು...!

ಇದೀಗ ಬಂದ ಸುದ್ದಿ

ಸಾಲಮುಕ್ತಿಗೆ ನೆರವಾದ ಸಹೋದರ – ಅಣ್ಣ ತಮ್ಮ ಅಂದ್ರೆ ಹೀಗಿರಬೇಕು…!

 ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಮುಖ್ಯಸ್ಥ ಅನಿಲ್‌ ಅಂಬಾನಿ ಎರಿಕ್ಸನ್‌ ಇಂಡಿಯಾ ಕಂಪನಿಗೆ ಬಾಕಿ ಕೊಡಬೇಕಾಗಿದ್ದ 458.77 ಕೋಟಿ ರೂಪಾಯಿ ಪಾವತಿಸಿ ಜೈಲು ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾರೆ. ಅದ್ರೆ ಇಲ್ಲಿ ವಿಷ್ಯ ಅದಲ್ಲ ಅನಿಲ್ ಅಂಬಾನಿ ಸಾಲಮುಕ್ತಿಗೆ ನೆರವಾಗಿದ್ದು  ಸಹೋದರ ಮುಖೇಶ್ ಅಂಬಾನಿ ಹಾಗೂ ಅತ್ತಿಗೆ ನೀತಾ ಅಂಬಾನಿ.

ರಿಲಯನ್ಸ್ ಕಂಪನಿಯಿಂದ ನಮಗೆ ಬಾಕಿ ಪಾವತಿಯಾಗಿಲ್ಲ ಅಂತಾ ಎರಿಕ್ಸನ್‌ ಇಂಡಿಯಾ ಕಂಪನಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೋರ್ಟ್ ಮುಂದಿನ 4 ವಾರದೊಳಗೆ ಎರಿಕ್ಸನ್‌ ಕಂಪನಿಗೆ ಅದರ ಹಣ ಪಾವತಿಸಬೇಕು. ಇಲ್ಲವಾದ್ರೆ ಮೂರು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿತ್ತು. ಇದೀಗ ಅನಿಲ್ ಅಂಬಾನಿ ಎರಿಕ್ಸನ್‌ ಇಂಡಿಯಾ ಕಂಪನಿಗೆ ಸಂಪೂರ್ಣ ಬಾಕಿ ಪಾವತಿಸಿದ್ದಾರೆ. ಈ ಮೂಲಕ ಮೂರು ತಿಂಗಳ ಜೈಲು ಶಿಕ್ಷೆಯಿಂದ ಅನಿಲ್ ಅಂಬಾನಿ ಪಾರಾಗಿದ್ದಾರೆ.

ಸಹೋದರನ ನೆರವಿಗೆ ಬಂದ ಮುಖೇಶ್ .!

ಅನಿಲ್​ ಅಂಬಾನಿಗೆ ಸಹಾಯ ಮಾಡಿದ್ದು ಅಣ್ಣ ಮುಖೇಶ್​ ಅಂಬಾನಿ, ಹಾಗೂ ಅತ್ತಿಗೆ ನೀತಾ ಅಂಬಾನಿ. ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬಂದ ಅಣ್ಣನಿಗೆ ಅನಿಲ್​ ಹೃದಯಪೂರ್ವಕ ಧನ್ಯವಾದ ಹೇಳಿದ್ದಾರೆ. ಅಲ್ಲದೇ ಅವರ ಕುಟುಂಬ ಕಡೆತನಕ ಮುಖೇಶ್​ ಅಂಬಾನಿಗೆ ಕೃತಜ್ಞರಾಗಿ ಇರೋದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ಆಸ್ತಿ ವಿಚಾರದಲ್ಲಿ ಕಚ್ಚಾಟ ಮಾಡಿಕೊಂಡು ಕೊಲೆ ಮಾಡೋ ಸಹೋದರರು ನಮ್ಮಲ್ಲಿ ಇದ್ದಾರೆ. ಆದ್ರೆ ಈ ಸಹೋದರರು ಶ್ರೀಮಂತರಾದ್ರೂ ಎಲ್ಲಾ ವೈಮನಷ್ಯ ಮರೆತು ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img