Wednesday, November 25, 2020
Home ರಾಜ್ಯ ಶೃಂಗೇರಿಯಲ್ಲಿ ಸಿಎಂಗೆ ಸಿಕ್ತಾ ಪುತ್ರನ ಸೋಲಿನ ಸೂಚನೆ ? ಅಲ್ಲಿ ಸಂಭವಿಸಿದ ಅಪಶಕುನವೇನು?

ಇದೀಗ ಬಂದ ಸುದ್ದಿ

ಕೊರೋನಾ ಅಬ್ಬರ : ಅಮೆರಿಕಾದಲ್ಲಿ ಒಂದೇ ದಿನ...

ವಾಷಿಂಗ್ಟನ್: ಇಷ್ಟು ದಿನ ಅತೀ ಹೆಚ್ಚು ಸೋಂಕಿನಿಂದ ದಾಖಲೆ ಬರೆಯುತ್ತಿದ್ದ ಅಮೆರಿಕಾ ಇದೀಗ ಸಾವಿನಲ್ಲೂ ದಾಖಲೆ ಬರೆದಿದೆ. 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕಾದಲ್ಲಿ ಒಂದೇ ದಿನ...

ಉ.ಪ್ರದೇಶದ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರಿಟ್ಟ ಸಿಎಂ...

ಲಕ್ನೋ, ನ. 25: ಉತ್ತರ ಪ್ರದೇಶದ ವಿಮಾನ ನಿಲ್ದಾಣದ ಹೆಸರು ಬದಲಾಯಿಸಲು ಯೋಗಿ ಆದಿತ್ಯನಾಥ್ ನಿರ್ಧರಿಸಿದ್ದಾರೆ. ಈ ಕುರಿತಂತೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಖ್ಯಾತ ಟಿ20 ಲೀಗ್ ಗೆ ಗುಡ್ ಬೈ...

 ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಸಂಕಷ್ಟದ ನಡುವೆಯೇ ಆಸ್ಟ್ರೇಲಿಯಾದ ದಿಗ್ಗಜ ಆಟಗಾರ ಡೇವಿಡ್​ ವಾರ್ನರ್​ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಪ್ರಸಿದ್ಧ ಟಿ20 ಲೀಗ್​ನಿಂದ ಹೊರಗುಳಿಯುವುದಾಗಿ ಹೇಳಿದ್ದಾರೆ. ಹೌದು,...

ಪ.ಬಂಗಾಳ ‘ಎರಡನೇ ಕಾಶ್ಮೀರ’ವಾಗಿ ಮಾರ್ಪಟ್ಟಿದೆ: ಬಿಜೆಪಿ ಮುಖ್ಯಸ್ಥ...

 ಕೋಲ್ಕತ್ತ:‍ ಪಶ್ಚಿಮ ಬಂಗಾಳ 'ಎರಡನೇ ಕಾಶ್ಮೀರವಾಗಿ' ಮಾರ್ಪಟ್ಟಿದೆ. ಇಲ್ಲಿ ನಿತ್ಯ ಉಗ್ರರನ್ನು ಬಂಧಿಸಲಾಗುತ್ತಿದೆ. ದಿನಬೆಳಗಾದರೆ ಅಕ್ರಮ ಬಾಂಬ್‌ ತಯಾರಿಕಾ ಕಾರ್ಖಾನೆಗಳು ಪತ್ತೆಯಾಗುತ್ತಿವೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ...

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿಕ್ಷೆಯ ಪೊಗರು ಸಿನಿಮದ ಚಿತ್ರೀಕರಣ ಇತ್ತೀಚಿಗಷ್ಟೆ ಮುಕ್ತಾಯವಾಗಿದೆ. ಇದೀಗ ಪಗರು ಪೋಸ್ಟ್ ಪ್ರಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ನಿರತವಾಗಿದೆ. ಭಾರಿ ಕುತೂಹಲ ಮತ್ತು ನಿರೀಕ್ಷೆ...

ಶೃಂಗೇರಿಯಲ್ಲಿ ಸಿಎಂಗೆ ಸಿಕ್ತಾ ಪುತ್ರನ ಸೋಲಿನ ಸೂಚನೆ ? ಅಲ್ಲಿ ಸಂಭವಿಸಿದ ಅಪಶಕುನವೇನು?

ಮಾರ್ಚ್ 19, ಶೃಂಗೇರಿ : ಮಗನ ಬಿ ಫಾರಂಗೆ ಪೂಜೆ ಸಲ್ಲಿಸಲೆಂದು ಶೃಂಗೇರಿಗೆ ತೆರಳಿದ್ದ ಸಿಎಂ ಹೆಚ್ ಡಿ ಕುಮಾರಸ್ವಾಮಿ ಚಿಂತೆ ಹೆಚ್ಚಾದಂತಿದೆ. ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಕುಟುಂಬಕ್ಕೆ ಅಶುಭ ಸೂಚನೆ ಸಿಕ್ಕಿದೆ.

ತೋರಣ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಹರಕೆ ಸಲ್ಲಿಕೆಗಾಗಿ 9 ಇಡುಗಾಯಿ ಒಡೆಯಬೇಕಿತ್ತು. ಕುಮಾರಸ್ವಾಮಿ  ಹಾಗೂ ಪತ್ನಿ ಅನಿತಾ ಒಂದೊಂದು ಕಾಯಿಯನ್ನು ಒಡೆದರು. ಇದೇ ವೇಳೆ ನಿಖಿಲ್ 5 ತೆಂಗಿನ ಕಾಯಿ ಒಡೆಯಲು ಮುಂದಾದರು. ಈ ಪೈಕಿ ಒಂದು ಕಾಯಿ ಒಡೆಯಲಿಲ್ಲ ಎನ್ನಲಾಗಿದೆ. ಬಳಿಕ ಅರ್ಚಕರು ಒಡೆಯದ ಕಾಯಿಯನ್ನು ತೆಗೆದುಕೊಂಡು ಮತ್ತೆ ಒಡೆದರು ಎನ್ನಲಾಗಿದೆ.

ಇದು ಅಶುಭ ಸೂಚನೆ ಎಂದು ಸ್ಥಳೀಯರು ಮಾತನಾಡಿಕೊಳ್ಳಲಾರಂಭಿಸಿದ್ದಾರೆಆದರೆ ಗಣಪತಿ ಸನ್ನಿಧಾನದಲ್ಲಿ ನಾಲ್ಕು ಒಡೆದರೂ ಒಂದು ಕಾಯಿ ಒಡೆಯದಿರುವುದು ಶುಭ ಸೂಚನೆಯಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 
 
ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದು ತೋರಣ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾಯಿ ಒಡೆದಾಗ ಒಂದು ಕಾಯಿ ಒಡೆದಿರಲಿಲ್ಲ. ಈಗ ಇತಿಹಾಸ ಮರುಕಳಿಸಿರುವುದು ತಳಮಳಕ್ಕೆ ಕಾರಣವಾಗಿದೆ. 
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್ಲಾ ರೀತಿಯ ಪ್ರಚಾರ ನಡೆಯುತ್ತಿದೆ. ಮಂಡ್ಯಕ್ಕೆ ಎಲ್ಲಾ ನಟರು ದಾಳಿ ಇಟ್ಟರೂ ಪರವಾಗಿಲ್ಲ. ಚಿತ್ರರಂಗದ ನಟರು ಬಂದು ದಾಳಿ ಮಾಡಿದರೂ ತಮಗೇನೂ ಆತಂಕ ಇಲ್ಲ. ತಾವು ಕಾಣದೆ ಇರೋ ಚಿತ್ರ ನಟರೇನೂ ಅವರಲ್ಲ. ನಾನು ಚಿತ್ರರಂಗದಿಂದಲೇ ಬಂದವನು. ಯಾರೇ ಬಂದು ಪ್ರಚಾರ ಮಾಡಿದರೂ ತಮಗೇನು ಆಂತಕವಿಲ್ಲ ಎಂದು ಅವರು ಬೇಸರದಿಂದಲೇ ನುಡಿದರು.
ಇದೆ ವೇಳೆ ಮಾತನಾಡಿದ ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್‌, ಲೋಕಸಭಾ ಚುನಾವಣೆಯಲ್ಲಿ ತಮ್ಮ‌ ಪಕ್ಷದ ಅಭ್ಯರ್ಥಿಗಳ ಪರವಾಗಿ ಪೂಜೆ ಸಲ್ಲಿಸಿದ್ದೇವೆ‌. ಪಕ್ಷದ  ಬಿ.ಫಾರಂ ಅನ್ನು ಜಗದ್ಗುರುಗಳು ಹಾಗೂ ಶಾರದಾಂಬೆ ಮುಂದಿಟ್ಟು ಆಶೀರ್ವಾದ ಪಡೆದಿದ್ದೇವೆ ಎಂದರು.

TRENDING