ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಪೂಜಾಗಾಂಧಿ 3 ದಿನಕ್ಕೆ 4.5 ಲಕ್ಷ ಬಿಲ್ ಮಾಡಿ ಎಸ್ಕೇಪ್ ಆಗಿದ್ದಾರೆ ಎಂದು ದೂರು ದಾಖಲಾಗಿದೆ. ಅಶೋಕ ಹೋಟೆಲ್ ಆಡಳಿತ ಮಂಡಳಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಹೊಟೇಲ್ ನವರು ಪೂಜಾ ಸಂಪರ್ಕಿಸಲು ಪ್ರಯತ್ನಿಸಿದ್ರೆ ಅದು ಸಾಧ್ಯವಾಗಿರಲಿಲ್ಲ. ಬಳಿಕ ವಿಚಾರಣೆ ವೇಳೆ ಪೂಜಾಗಾಂಧಿ ಪೊಲೀಸರ ಸಮ್ಮುಖದಲ್ಲಿ ಹೋಟೆಲ್ ಸಿಬ್ಬಂದಿಗೆ 2 ಲಕ್ಷ ಕೊಟ್ಟು, ಉಳಿದ ಹಣ ನೀಡಲು ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಮಾರ್ಚ್ 11ರಂದು ಪೂಜಾ ಗಾಂಧಿ ಅಶೋಕ ಹೋಟೆಲ್ ನಲ್ಲಿ ರೂಮ್ ಪಡೆದಿದ್ದು ಮೂರು ದಿನ ಅಲ್ಲೇ ಉಳಿದುಕೊಂಡಿದ್ದರು ಎನ್ನಲಾಗಿದೆ
