Tuesday, January 26, 2021
Home ಜಿಲ್ಲೆ ಧಾರವಾಡ ಅಲಲಾ ! ಕಿಮ್ಸ್ ನಲ್ಲಿ ಮತ್ತೊಂದು ಅವಾಂತರ –ರೋಗಿಗೆ ಬೇರೆ ರಕ್ತ ನೀಡಿದ ಟೆಕ್ನೀಷಿಯನ್

ಇದೀಗ ಬಂದ ಸುದ್ದಿ

ಅಲಲಾ ! ಕಿಮ್ಸ್ ನಲ್ಲಿ ಮತ್ತೊಂದು ಅವಾಂತರ –ರೋಗಿಗೆ ಬೇರೆ ರಕ್ತ ನೀಡಿದ ಟೆಕ್ನೀಷಿಯನ್

ಮಾರ್ಚ್ 19 : ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಸದಾ ಒಂದಿಲ್ಲೊಂದು ತಪ್ಪನ್ನು ಎಸಗುತ್ತಾ ಮುಗ್ದ ಜನರ ಮೇಲೆ ತನ್ನ ಅಮಾಯಕತೆಯನ್ನು ಮೆರೆಯುತ್ತಾ ಬಂದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ವ್ಯಕ್ತಿಯೊಬ್ಬರು, ಅನಾರೋಗ್ಯದ ಕಾರಣದಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.  3 ದಿನಗಳ ಕಾಲ ಚಿಕಿತ್ಸೆ ನೀಡಿದ ವೈದ್ಯರು ಈ ರೋಗಿಯ ಮೈಯಲ್ಲಿ ರಕ್ತ ಕಡಿಮೆ ಇದೆ ಇವನಿಗೆ ರಕ್ತ ನೀಡಬೇಕೆಂದು ಸೂಚಿಸಿದ್ದರು. ಅವನ ರಕ್ತದ ಗುಂಪನ್ನು ಕಿಮ್ಸ್ ನಲ್ಲಿ ಲ್ಯಾಬ್  ಟೆಕ್ನಿಷಿಯನ್  B ನೆಗೆಟಿವ್ ಅಂತಾ ಕೊಡ್ತಾರೆ…

ಆದರೆ ಅಸಲಿಗೆ ಆ ವ್ಯಕ್ತಿಯ ರಕ್ತದ ಗುಂಪು B ಪೊಸಿಟಿವ್ ಇರತ್ತೆ ಆದರೂ ಇದನ್ನು ಅಲ್ಲಿನ ಸಿಬ್ಬಂದಿ B ನೆಗೆಟಿವ್ ಅಂತಾನೆ ಕೊಡ್ತಾರೆ.  ಏನು ಅರಿಯದೇ ರೋಗಿಯ ಮಗ B ನೆಗೆಟಿವ್ ರಕ್ತವನ್ನು ತಂದು ಕೊಟ್ಟಾಗ …ಅಲ್ಲಿನ ಸಿಬ್ಬಂದಿ B ಪೊಸಿಟಿವ್ ಇರುವ ರೋಗಿಗೆ B ನೆಗೆಟಿವ್ ರಕ್ತವನ್ನೇ  ಹಾಕಿಸಿದ್ದಾರೆ.

ಕೊನೆಗೆ ವಿಷಯ ಗೊತ್ತಾಗಿ, ಟೆಕ್ನಿಷಿಯನ್ ನಾಗವೇಣಿ ಬಳಿ ವಿಚಾರಿಸಿದರೆ,ಇಂತಹ ಸಣ್ಣಪುಟ್ಟ ಎಡವಟ್ಟುಗಳು  ಆಗ್ತಾನೇ ಇರುತ್ತವೆ ತಲೆಕೆಡಿಸಿಕೊಳ್ಳಬೇಡಿ ಎಂದು ಹಾರಿಕೆ ಉತ್ತರ ಕೊಟ್ಟಿದ್ದಾರೆ. ಅಲ್ಲದೆ, ಫೈಲ್ ನಲ್ಲಿದ್ದ ದಾಖಲೆಗಳನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಅಲ್ಲದೆ ಇದನ್ನೆಲ್ಲಾ ಪ್ರಶ್ನಿಸಬಾರದು ಎಂದು ಆವಾಜ್  ಹಾಕಿ ಕಳಿಸಿದ್ದಾಳೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.

TRENDING