Sunday, January 24, 2021
Home ಜಿಲ್ಲೆ ಧಾರವಾಡ ರಾಜಾ ಕಾಲುವೆ ಮೇಲೆ ಪ್ರತಿಷ್ಠಿತ ಕಣ್ಣಾಸ್ಪತ್ರೆ

ಇದೀಗ ಬಂದ ಸುದ್ದಿ

ರಾಜಾ ಕಾಲುವೆ ಮೇಲೆ ಪ್ರತಿಷ್ಠಿತ ಕಣ್ಣಾಸ್ಪತ್ರೆ

ಹುಬ್ಬಳ್ಳಿ : ನಗರದ ಪ್ರತಿಷ್ಠಿತ ಕಣ್ಣಿನ ಖಾಸಗಿ ಆಸ್ಪತ್ರೆಯಾದ ಎಂ ಎಂ ಜೋಶಿ ಆಸ್ಪತ್ರೆ ಭಾರೀ ಅಕ್ರಮ ಎಸಗಿರುವುದು ಬಹಿರಂಗವಾಗಿದೆ. ರಾಜಾ ಕಾಲುವೆ ಮೇಲೆ ಅಕ್ರಮವಾಗಿ ಕಟ್ಟಡ ಕಟ್ಟಿದ್ದಾರೆ ಎಂದು ಮಾಹಿತಿ ಹಕ್ಕು ಹೋರಾಟಗಾರರು ಬಯಲಿಗೆಳೆದಿದ್ದಾರೆ.

ಇದೆ ರೀತಿ ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಸಾಲು ಸಾಲು ಕಟ್ಟಡಗಳು ಪರವಾನಗಿ ಇಲ್ಲದೆ ತಲೆ ಎತ್ತಿ ನಿಂತಿವೆ ಇದಕ್ಕೆಲ್ಲ ಕಾರಣ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಭ್ರಷ್ಟ ಅಧಿಕಾರಿಗಳೇ ಎನ್ನಲಾಗ್ತಿದೆ.

ಈ ಆಸ್ಪತ್ರೆ ಕಟ್ಟಡ ನಗರದ ಹೃದಯ ಭಾಗವಾದ ಹೊಸೂರ ಸರ್ಕಲ್ ಬಳಿ ಇದ್ದು ಎಲ್ಲ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದೆ ಮಾರ್ಗವಾಗಿ ಸಂಚರಿಸುತ್ತಿದ್ದರು ಕೂಡಾ ಅವರ ಕಣ್ಣುಗಳಿಗೆ ಮಂಜು ಕವಿದಿದೆಯೋ ಅಥವಾ ಇದರಲ್ಲಿ ಎಲ್ಲರೂ ಶಾಮೀಲಾಗಿದ್ದಾರೋ ಎನ್ನುವ ಪ್ರಶ್ನೆ ಕಾಡತೊಡಗಿದೆ.

ಕಟ್ಟಡದ ಮಾಲೀಕ ಎಂ ಎಂ ಜೋಶಿ ಪದ್ಮಶ್ರೀ ರಾಜ್ಯೋತ್ಸವ ಪ್ರಶಸ್ತಿ ಹಾಗೂ AIOS ಜೀವಮಾನ ಸಾಧನೆ ಪ್ರಶಸ್ತಿ FIE ಫೌಂಡೇಶನ್ ರಾಷ್ಟ್ರೀಯ ಪ್ರಶಸ್ತಿ ಕೂಡಾ ಲಭಿಸಿದ್ದು ಇಂತಹ ಪ್ರತಿಷ್ಠಿ ಪ್ರಶಸ್ತಿ ವಿಜೇತರು ನಿಯಮ  ಬಾಹಿರವಾಗಿ ಕಟ್ಟಡ ನಿರ್ಮಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

TRENDING