Thursday, September 23, 2021
Homeದೇಶಯುಪಿಯಲ್ಲಿ SP, BSP ವಿರುದ್ಧ 7 ಕ್ಷೇತ್ರಗಳಲ್ಲಿ ಕೈ ಸ್ಫರ್ಧೆ ಇಲ್ಲ - ಕೇಸರಿಗೆ ಟಕ್ಕರ್...

ಇದೀಗ ಬಂದ ಸುದ್ದಿ

ಯುಪಿಯಲ್ಲಿ SP, BSP ವಿರುದ್ಧ 7 ಕ್ಷೇತ್ರಗಳಲ್ಲಿ ಕೈ ಸ್ಫರ್ಧೆ ಇಲ್ಲ – ಕೇಸರಿಗೆ ಟಕ್ಕರ್ ನೀಡಲು ಚಕ್ರವ್ಯೂಹ..!

ಉತ್ತರ ಪ್ರದೇಶದ ಎಲ್ಲಾ 80 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಹುದು. ಈ ಬಗ್ಗೆ ನಮ್ಮ ತಕರಾರು ಇಲ್ಲ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಮಾಯಾವತಿ, ಬಿಜೆಪಿ ಮತ್ತು ಅದರ ಮೈತ್ರಿ ಕೂಟವನ್ನು ಮಣಿಸಲು ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿ ಕೂಟ ಶಕ್ತವಾಗಿದೆ. ನಮ್ಮ ಸ್ವಂತ ಬಲದಿಂದಲೇ ನಾವು ಬಿಜೆಪಿಯನ್ನು ಮಣಿಸುತ್ತೇವೆ. ಇದೇ ವೇಳೆ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿರುವ ಕಾಂಗ್ರೆಸ್ ಪಕ್ಷದ ನಿರ್ಧಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ಮಾಯಾವತಿ ಮತ್ತು ಅಖಿಲೇಶ್ ಯಾದವ್  ತಲಾ 38-37 ಸೀಟು ಗಳಲ್ಲಿ ಮೈತ್ರಿ ಮೂಲಕ ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ. ರಾಯ್ ಬರೇಲಿ ಮತ್ತು ಅಮೇಥಿ ಕ್ಷೇತ್ರಗಳನ್ನು ಕಾಂಗ್ರೆಸ್​​ಗೆ ಬಿಟ್ಟುಕೊಟ್ಟಿದ್ದಾರೆ. ಉತ್ತರಪ್ರದೇಶದ ಒಟ್ಟು 80 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಸ್ಪರ್ಧಿಸದೇ ಇರಲು ಕಾಂಗ್ರೆಸ್ ನಿರ್ಧರಿಸಿದೆ. ಆದರೆ, ಈ ಕ್ಷೇತ್ರಗಳನ್ನು ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷಗಳ ಮೈತ್ರಿಗೆ ಬಿಟ್ಟುಕೊಡಲು ನಿರ್ಣಯಿಸಿದೆ ಎನ್ನಲಾಗಿದೆ. ಈ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಸೋಲಿಸಲು ಪಣ ತೊಟ್ಟಿರುವ ಎಸ್ ಪಿ, ಬಿಎಸ್ಪಿ ಕಾಂಗ್ರೆಸ್ ಚಕ್ರವ್ಯೂಹವನ್ನ ನಿರ್ಮಾಣ ಮಾಡಿವೆ.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img