Monday, January 25, 2021
Home ಕ್ರಿಕೆಟ್ ಧೋನಿಗೆ ಈಗ ಅಭಿಮಾನಿಗಳದ್ದೇ ಕಾಟ - ಚೆನ್ನೈ ಮೈದಾನದಲ್ಲಿ ಮತ್ತೆ ಮಾಹಿ ಕಣ್ಣಾಮುಚ್ಚಾಲೆ …!

ಇದೀಗ ಬಂದ ಸುದ್ದಿ

ಧೋನಿಗೆ ಈಗ ಅಭಿಮಾನಿಗಳದ್ದೇ ಕಾಟ – ಚೆನ್ನೈ ಮೈದಾನದಲ್ಲಿ ಮತ್ತೆ ಮಾಹಿ ಕಣ್ಣಾಮುಚ್ಚಾಲೆ …!

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಈಗ ಅಭಿಮಾನಿಗಳ ಕಾಟ ಜೋರಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ಧೋನಿಯನ್ನು ಅಪ್ಪಿಕೊಳ್ಳಲು ಮುಂದಾಗಿದ್ದ. ಇದೀಗ ಚೆನ್ನೈನಲ್ಲೂ ಇದೇ ರೀತಿಯ ಘಟನೆ ಮರುಕಳಿಸಿದೆ. ನಿನ್ನೆ ಚೆನ್ನೈನ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಅಭ್ಯಾಸ ಪಂದ್ಯ ನಡೆಯುತ್ತಿತ್ತು. ಈ ವೇಳೆ ಧೋನಿ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ನೇರವಾಗಿ ಮೈದಾನಕ್ಕೆ ನುಗ್ಗಿದ್ದಾನೆ. ಅಭಿಮಾನಿಯೊಬ್ಬ ಧೋನಿ ಹತ್ತಿರ ಬರುತ್ತಿದ್ದಂತೆ ಕೆಲ ಕಾಲ ಆತನ ಕೈಗೆ ಸಿಗದೆ ಮೈದಾನದಲ್ಲಿ ಓಡಾಡಿದ್ದಾರೆ. ಮಾಜಿ ಆಟಗಾರ ಎಲ್​​.ಬಾಲಾಜಿಗೆ ಅಡ್ಡಲಾಗಿ ಓಡಾಡುತ್ತ ಕೆಲ ಕಾಲ ನೆರದಿದ್ದವರಿಗೆ ರಂಜಿಸಿದ್ದಾರೆ. ಆದ್ರೆ ಅಭಿಮಾನಿಗಳು ಈ ರೀತಿಯಾಗಿ ಮೈದಾನಕ್ಕೆ ನುಗ್ಗೋದು ಒಳ್ಳೆಯ ಬೆಳವಣಿಗೆಯಲ್ಲ ಅಂತ ಕ್ರೀಡಾಭಿಮಾನಿಗಳು ಆತಂಕವ್ಯಕ್ತಪಡಿಸಿದ್ದಾರೆ. 

TRENDING