ಏಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಲಬುರ್ಗಿಯಲ್ಲಿ ಚುನಾವಣೆ ರಣಕಹಳೆ ಊದಿದ್ದಾರೆ. ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚೌಕಿದಾರ್, ಅಂಬಾನಿ ಜತೆ ಫ್ರಾನ್ಸ್ಗೆ ತೆರಳಿದ್ದು ಏಕೆ ಅಂತ ಪ್ರಶ್ನಿಸಿದ್ದಾರೆ. ದೇಶದ 30 ಸಾವಿರ ಕೋಟಿ ಹಣವನ್ನ ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದು ಯಾಕೆ? ಅಂತ ತಿರುಗೇಟು ನೀಡಿದ್ದಾರೆ. ಅನಿಲ್ ಅಂಬಾನಿ ರಕ್ಷಣಾ ಸಾಮಾಗ್ರಿ ತಯಾರಿಸುವ ಶಕ್ತಿ ಹೊಂದಿಲ್ಲ. ಆದ್ರೂ ಕರ್ನಾಟಕದ ಜನರ ಕೆಲಸವನ್ನು ಕಸಿದುಕೊಂಡು ಅಂಬಾನಿಗೆ ನೀಡಿದ್ದಾರೆ. ಹಿಂದುಸ್ತಾನದ ಚೌಕಿದಾರ ಕಳ್ಳರಿಗೆ ನೆರವು ನೀಡಿದ್ದಾರೆ ಎಂದು ರಾಹುಲ್ ಗುಡುಗಿದ್ದಾರೆ.
ಇದೇ ವೇಳೆ ಜಿಎಸ್ ಟಿಯನ್ನ ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಜರಿದ ರಾಹುಲ್ , ಮೋದಿ ನೋಟು ಬ್ಯಾನ್ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ರು.
