Tuesday, January 26, 2021
Home ಜಿಲ್ಲೆ ಬೆಂಗಳೂರು ಗ್ರಾಮಾಂತರ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ – 20 ಲಕ್ಷ ಮೌಲ್ಯದ ರಕ್ತ ಚಂದನ ವಶ

ಇದೀಗ ಬಂದ ಸುದ್ದಿ

ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ – 20 ಲಕ್ಷ ಮೌಲ್ಯದ ರಕ್ತ ಚಂದನ ವಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಲಯ ಅರಣ್ಯಾಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಅರಣ್ಯಾಧಿಕಾರಿ ಎಮ್ ಎಸ್ ಯೋಗೇಶ್ ನೇತೃತ್ವದ ತಂಡ ಹದಿನೈದರಿಂದ ಇಪ್ಪತ್ತು ಲಕ್ಷ ಬೆಲೆ ಬಾಳುವ 118 ರಕ್ತಚಂದನದ ತುಂಡುಗಳನ್ನು ವಶಕ್ಕೆ ಪಡೆದಿದೆ. ಕೃತ್ಯಕ್ಕೆ ಬಳಸಿದ್ದ  ವಾಹನ ವಶಪಡಿಸಿಕೊಂಡಿರೋ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಹನ ಚಾಲಕ ಪರಾರಿಯಾಗಿದ್ದು ಆತನಿಗಾಗಿ ಶೋಧ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ನೋಂದಣಿಯ ವಾಹನದಲ್ಲಿ ರಕ್ತ ಚಂದನ ಸಾಗಿಸಲಾಗುತ್ತಿತ್ತು. 

TRENDING