Friday, July 30, 2021
Homeರಾಜ್ಯಅಕ್ರಮ ಗಣಿಗಾರಿಕೆ ಪ್ರಕರಣ - ಶಾಸಕ ಬಿ. ನಾಗೇಂದ್ರ ಪೊಲೀಸ್ ವಶಕ್ಕೆ

ಇದೀಗ ಬಂದ ಸುದ್ದಿ

ಅಕ್ರಮ ಗಣಿಗಾರಿಕೆ ಪ್ರಕರಣ – ಶಾಸಕ ಬಿ. ನಾಗೇಂದ್ರ ಪೊಲೀಸ್ ವಶಕ್ಕೆ

ಅಕ್ರಮ ಅದಿರು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಬಿ ನಾಗೇಂದ್ರ ಅವರನ್ನ ಕೋರ್ಟ್ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣ ವಿಚಾರಣಾ ನ್ಯಾಯಾಲಯ ಈ ತೀರ್ಪು ನೀಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ತಮ್ಮ ವಿರುದ್ಧ ಹೊರಡಿಸಲಾಗಿದ್ದ ಜಾಮೀನು ರಹಿತ ಬಂಧನ ವಾರಂಟ್ ಹಿಂಪಡೆಯುವಂತೆ ಕೋರ್ಟ್ ಗೆ ಮನವಿ ಮಾಡಲು ಬಂದಿದ್ದ ಶಾಸಕನನ್ನು ವಶಕ್ಕೆ ಪಡೆಯುವಂತೆ ನ್ಯಾಯಾಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶಿಸಿದ್ದಾರೆ. 
ಪ್ರಕರಣ ಕುರಿತ ಸಾಕ್ಷಿ ವಿಚಾರಣೆ ವೇಳೆ ಸಮನ್ಸ್​ ನೀಡಿದರೂ ಶಾಸಕರಾದ ನಾಗೇಂದ್ರ ಹಾಗೂ ಆನಂದ್​ ಸಿಂಗ್​ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಕರೆ ತರುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ನೀಡಿತ್ತು.

TRENDING

spot_img
spot_img
spot_img
spot_img
spot_img
spot_img
spot_img
spot_img
spot_img
spot_img