ಗೋವಾದ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವಿಧಿವಶರಾಗಿದ್ದಾರೆ. ದೀರ್ಘ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಪರಿಕ್ಕರ್ ಕೆಲವೇನಿಮಿಷಗಳ ಹಿಂದೆ ಕೊನೆಯುಸಿರೆಳೆದಿದ್ದಾರೆ.

ರಾಷ್ಟ್ರಕಂಡಂತಹ ಅಪರೂಪದ ಅತ್ಯಂತ ಸರಳ ರಾಜಕಾರಣಿಯಾಗಿದ್ದ ಪರಿಕ್ಕರ್ ಗೋವಾದ ಅತ್ಯಂತ ಜನಾನುರಾಗಿ ಮುಖ್ಯಮಂತ್ರಿಯಾಗಿದ್ದರು. ಮುಖ್ಯಮಂತ್ರಿಯಾಗಿದ್ದಾಗಲೂ ಸ್ಕೂಟರ್ ನಲ್ಲೇ ಓಡಾಡುವ ಮೂಲಕ ಸರಳತೆಗೆ ಮತ್ತೊಂದು ಹೆಸರಾಗಿ ರಾಜಕೀಯ ಬದುಕು ಸಾಗಿಸಿದ್ದರು.
ಅತ್ಯಂತ ಮಾರಣಾಂತಿಕ ಕಾಯಿಲೆಯಿಂದ ಆಸ್ಪತ್ರೆ ಸೇರಿದ್ದರೂ, ಅಲ್ಲೇ ತಮ್ಮ ಸಾರ್ವಜನಿಕ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಮೋದಿ ಸರಕಾರದಲ್ಲಿ ರಕ್ಷಣಾ ಸಚಿವರಾಗಿ ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆಸಿ, ತಾವೆಂತಹ ಗಟ್ಟಿ ನಾಯಕ ಎಂಬುದನ್ನು ಸಾಬೀತುಪಡಿಸಿದ್ದರು. ಇತ್ತೀಚೆಗಷ್ಟೇ ತಮ್ಮ ಮೂಗಿಗೆ ಆಕ್ಸಿಜನ್ ಪೈಪ್ ಹಾಕಿಕೊಂಡೇ ಗೋವಾ ಬಜೆಟ್ ಮಂಡಿಸಿ ದೇಶದ ಗಮನ ಸೆಳೆದಿದ್ದರು. ಬಿಜೆಪಿಯ ಧೀಮಂತ ನಾಯಕನಾಗಿದ್ದ ಪರಿಕ್ಕರ್, ಗೋವಾದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಕಷ್ಟು ಶ್ರಮವಹಿಸಿದ್ದರು. ಚುನಾವಣಾ ಸಂದರ್ಭದಲ್ಲೇ ಪರಿಕ್ಕರ್ ಕೊನೆಯುಸಿರೆಳೆದಿರುವುದು, ಬಿಜೆಪಿಗೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.